ನಟಿ ಅದಿತಿ ಪ್ರಭುದೇವ ತಮ್ಮ ಹೊಸ ವರ್ಷಾಚರಣೆಯ ಸುಂದರ ವೀಡಿಯೋ ಮಾಡಿದ್ದಾರೆ. ಭಾವಿ ಪತಿ ಜೊತೆ ಕೊಡಗಿನ ಕಾಫಿ ತೋಟ, ಪಶ್ಚಿಮ ಘಟ್ಟಗಳಲ್ಲಿನ ಸುತ್ತಾಟ, ಕ್ಯಾಂಪ್‌ ಫೈರ್‌ನೊಂದಿಗೆ ಅವರಿಗೆ 2022 ಶುರುವಾಗಿದೆ. ಈ ಸಂದರ್ಭದಲ್ಲಿ ಅವರು ಸೆರೆಹಿಡಿದು ನಿರೂಪಿಸಿದ ವೀಡಿಯೋ ಇಲ್ಲಿದೆ.

ಸ್ಯಾಂಡಲ್‌ವುಡ್‌ನ ಬ್ಯುಸಿ ಹಿರೋಯಿನ್‌ ಅದಿತಿ ಪ್ರಭುದೇವ ಅವರ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿದೆ. ಈಗ ಹೊಸ ವರ್ಷದಲ್ಲಿ ತಾವು ವರಿಸಲಿರುವ ಹುಡುಗನೊಂದಿಗೆ ಮತ್ತೊಂದು ಫೋಟೊ ಹಂಚಿಕೊಂಡಿದ್ದಾರವರು. 2021ರ ಕೊನೆಯ ದಿನದಂದು ಪ್ರವಾಸ ಹೊರಟು, ನೂತನ ವರ್ಷವನ್ನು ಬರಮಾಡಿಕೊಂಡ ಸಂದರ್ಭಗಳನ್ನು ವೀಡಿಯೋ ಮಾಡಿ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಭಾವಿ ಪತಿಯ ಒಡೆತನದ ಕೊಡಗಿನಲ್ಲಿರುವ ಕಾಫಿ ತೋಟಕ್ಕೆ ಭೇಟಿ ಕೊಟ್ಟ ಅವರು ನಂತರ ಪಶ್ಚಿಮ ಘಟ್ಟಗಳಲ್ಲಿ ಸುತ್ತಾಡಿದ ಅನುಭವ ಹೇಳಿಕೊಂಡಿದ್ದಾರೆ.

ಕಾಡಿನಲ್ಲಿ ಅವರಿಗೆ ಕಾಡೆಮ್ಮೆ, ಆನೆಗಳು ಕಾಣಿಸಿವೆ. ಮೊದಲ ಬಾರಿ ಕಾಫಿ ತೋಟಕ್ಕೆ ಭೇಟಿ ನೀಡಿ, ಕಾಫಿ ಪುಡಿ ತಯಾರಾಗುವುದು ಹೇಗೆ? ಕಾಳುಮೆಣಸಿನ ಬಳ್ಳಿ ಹೇಗಿರುತ್ತದೆ? ಎನ್ನುವ ಕುರಿತು ಅವರು ವೀಡಿಯೋದಲ್ಲಿ ಡೆಮೋ ಕೊಟ್ಟಿದ್ದಾರೆ. ನಂತರ ಮದುವೆಯಾಗುವ ಹುಡುಗನ ಮನೆಯ ಸದಸ್ಯರ ಜೊತೆಗಿನ ಫೊಟೊ, ಆ ಮನೆಯಲ್ಲಿನ ಹಸು, ಬೆಕ್ಕುಗಳೊಂದಿಗಿನ ವೀಡಿಯೋ ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಮೊದಲ ಬಾರಿ ಹೀಗೆ ವಿಶೇಷವಾಗಿ ನೂತನ ವರ್ಷವನ್ನು ಸ್ವಾಗತಿಸಿದ್ದೇನೆ. ನಿಮ್ಮೆಲ್ಲರಿಗೂ 2022 ಖುಷಿ ತರಲಿ” ಎಂದು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಅದಿತಿ ಅವರ ವೀಡಿಯೋಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗೆ ಕಾಮೆಂಟ್‌ಗಳು ವ್ಯಕ್ತವಾಗಿವೆ.

Previous articleNBK107ನಲ್ಲಿ ದುನಿಯಾ ವಿಜಯ್‌; ಟ್ವೀಟ್‌ ಮಾಡಿದ ಚಿತ್ರನಿರ್ದೇಶಕ ಗೋಪಿಚಂದ್‌ ಮಲಿನೇನಿ
Next articleವೀಡಿಯೊ | ಚಿರಂಜೀವಿ – ರೆಗಿನಾ ‘ಆಚಾರ್ಯ’ ಲಿರಿಕಲ್‌ ಸಾಂಗ್‌; ಫೆಬ್ರವರಿ 4ಕ್ಕೆ ಸಿನಿಮಾ

LEAVE A REPLY

Connect with

Please enter your comment!
Please enter your name here