Bigg Boss Kannada ಶೋ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳಿಗೆ ಹೊಸ ರೀತಿಯ ಟಾಸ್ಕ್‌ ನೀಡಲಾಗಿದೆ. ಮನೆಯೊಳಗೆ ಎರಡು ಟೀವಿ ವಾಹಿನಿಗಳು ರೂಪುಗೊಂಡಿವೆ. ಈ ಚಾನೆಲ್‌ಗಳ ಪೈಕಿ ಹೆಚ್ಚು ಮನರಂಜನೆ ನೀಡುವ ವಾಹಿನಿ ಯಾವುದು ಎನ್ನುವುದನ್ನು ವೀಕ್ಷಕರೇ ವೋಟಿಂಗ್‌ ಮೂಲಕ ನಿರ್ಧರಿಸಬೇಕಿದೆ.

ಕಲರ್ಸ್‌ ಕನ್ನಡದ ನೂತನ ಬಿಗ್‌ಬಾಸ್‌ ಪ್ರೋಮೊದಲ್ಲಿ ಹೊಸ ರೀತಿಯ ಟಾಸ್ಕ್‌ ಇದೆ. ಬಿಗ್‌ಬಾಸ್‌ ಶೋ ಇತಿಹಾಸದಲ್ಲೇ ಇದೊಂದು ವಿಶಿಷ್ಟ ಟಾಸ್ಕ್‌. ಮನೆಯಲ್ಲಿ MM ಟೀವಿ ಮತ್ತು DD ಟೀವಿ ಎನ್ನುವ ಎರಡು ಮನರಂಜನಾ ವಾಹಿನಿಗಳು ರೂಪುಗೊಂಡಿವೆ. MM ವಾಹಿನಿಯಲ್ಲಿ ಧನರಾಜ್, ಹನುಮಂತ, ಶಿಶಿರ್‌, ರಜತ್‌, ಮೋಕ್ಷಿತಾ ಹಾಗೂ ಚೈತ್ರಾ ಇದ್ದಾರೆ. DD ವಾಹಿನಿಯ ತಂಡದಲ್ಲಿ ಸುರೇಶ್‌, ತ್ರಿವಿಕ್ರಮ್‌, ಭವ್ಯಾ, ಐಶ್ವರ್ಯಾ, ಗೌತಮಿ ಹಾಗೂ ಮಂಜಣ್ಣ ಇದ್ದಾರೆ. ಈ ವಾರ ಅತೀ ಹೆಚ್ಚು ಮನರಂಜನೆ ನೀಡುವ ವಾಹಿನಿಯ ತಂಡ ಯಾವುದು ಎಂದು ವೀಕ್ಷಕರೇ ನಿರ್ಧರಿಸಿ ವೋಟ್‌ ಮಾಡಬೇಕಿದೆ. ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ಮತ ಚಲಾಯಿಸಬೇಕು. ಬುಧವಾರ ಬೆಳಗ್ಗೆವರೆಗೂ ವೋಟಿಂಗ್ ಲೈನ್ಸ್ ಓಪನ್‌ ಇರಲಿದೆ. ಯಾವ ತಂಡ ಇಷ್ಟವಾಗುತ್ತೋ… ಅವರಿಗೆ ವೋಟ್‌ ಮಾಡುವ ಜವಾಬ್ದಾರಿ ವೀಕ್ಷಕರ ಮೇಲಿದೆ!

ಪ್ರೋಮೋದಲ್ಲಿ ವಾಹಿನಿಗಳ ಮನರಂಜನೆಯ ಝಲಕ್‌ ಇದೆ. ಚೈತ್ರಾ ಕುಂದಾಪುರ ಅವರು ಗೌತಮಿ ಅವರ ಬಗ್ಗೆ, ‘ಯುವರಾಣಿ ಮೇಲಿನ ಅಸೂಯೆಗೆ ಕಳಚಿತು ಪಾಸಿಟಿವಿಟಿಯ ಮುಖವಾಡ’ ಎಂದು ಸುದ್ದಿ ಮಾಡಿದ್ದಾರೆ. ‘ಹನುಮ ಅವರು ಬರೀ ಹಾಡು ಹಾಡಿಕೊಂಡು ಎಲ್ಲರನ್ನೂ ಗೆದ್ದೆ ಅಂತ ಅಂದುಕೊಂಡಿದ್ದಾರೆ. ಅವರಿಗೆ ಗೊತ್ತಿಲ್ಲ ಅವರ ವೀಕ್ನೆಸ್‌ ಈಗಾಗಲೇ ಮನೆಯವರಿಗೆ ಗೊತ್ತಾಗಿದೆ ಅಂತ’ ಎಂದು ಹನುಮಂತನ ಬಗ್ಗೆ ಐಶ್ವರ್ಯ ನ್ಯೂಸ್‌ ಮಾಡಿದ್ದಾರೆ. ಇದರಲ್ಲಿ ಅಡುಗೆ ಕಾರ್ಯಕ್ರಮಗಳೂ ಇವೆ. ಎರಡು ವಾಹಿನಿಗಳ ಪೈಕಿ ಯಾರಿಗೆ ಹೆಚ್ಚು ವೋಟ್‌ಗಳು ಬರಬಹುದು ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here