ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾಗೆ AI ಹಾಡೊಂದನ್ನು ರೂಪಿಸಲಾಗಿದೆ. ಶ್ರೇಯಾ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಹಾಡಿರುವ ಈ ಹಾಡಿಗೆ ಗೋಪಿ ಸುಂದರ್ ಸಂಗೀತ ಸಂಯೋಜನೆಯಿದೆ.
ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಫುಟ್ಬಾಲ್ ತಾರೆ ಲಿಯೊನಲ್ ಮೆಸ್ಸಿಗಾಗಿ ‘ಮೈದಾನಂ ಮೀದಾ…ಒಕ್ಕ ವೀರುಡು…’ ಎನ್ನುವ AI ಹಾಡೊಂದನ್ನು ರೂಪಿಸಲಾಗಿತ್ತು. ಈ ಹಾಡನ್ನು ವಿನ್ಯಾಸ ಮಾಡಿದವರೇ ಈಗ ‘ಕೊರಗಜ್ಜ’ ಸಿನಿಮಾಗೆ AI ಹಾಡೊಂದನ್ನು ಮಾಡಿದ. ಈ ಹಾಡಿಗೆ ಶ್ರೇಯ ಘೋಷಾಲ್ – ಅರ್ಮನ್ ಮಲಿಕ್ ದನಿಯಾಗಿದ್ದಾರೆ. ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಈ ‘ಗಾಳಿ ಗಂಧ… ತೀಡಿ ತಂದ…’ ಹಾಡಿಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ಸಂಯೋಜಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಮೊನ್ನೆಯಷ್ಟೇ ಧ್ವನಿಮುದ್ರಣಗೊಂಡಿದೆ.
ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ಬಿಡುಗಡೆ ಗೊಳಿಸಿದ್ದ ಚಿತ್ರತಂಡ ಈಗ ಈ ಹಾಡಿನಲ್ಲಿ ಬರುವ ಮುಗ್ಧ ಪ್ರೇಮಿಗಳ ಸ್ಟಿಲ್ಗಳನ್ನು ಬಿಡುಗಡೆಗೊಳಿ, ಚಿತ್ರಕ್ಕೆ ಹೊಸ ಆಯಾಮ ಇರುವುದನ್ನು ತೋರಿಸಿದೆ. ‘ಕೊರಗಜ್ಜ’ ಚಿತ್ರದಲ್ಲಿ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಲೂಬಹುದು. ಸದ್ಯದಲ್ಲೇ ರಿಲೀಸ್ ಆಗಲಿರುವ ಸಿನಿಮಾ ಇದಕ್ಕೆ ಉತ್ತರ ನೀಡಲಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯಗಳಿಂದ ಟ್ಯೂನ್ ಮಾಡಿರುವ ಈ ಎರಡನೆಯ ಹಾಡು ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಲಿದೆ ಎನ್ನುವುದ ನಿರ್ದೇಶಕರ ಅನಿಸಿಕೆ.










