‘ಕೋಟಿಗೊಬ್ಬ 3’ ಯಶಸ್ಸಿನಲ್ಲಿರುವ ಕಿಚ್ಚ ಸುದೀಪ್ ದಾಂಪತ್ಯಕ್ಕೀಗ 20 ವರ್ಷ. ಪತ್ನಿ ಪ್ರಿಯಾಗೆ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಸುದೀಪ್‌ – ಪ್ರಿಯಾ ದಂಪತಿಗೆ ಸ್ಯಾಂಡಲ್‌ವುಡ್‌ನ ಹಲವರಿಂದ ಟ್ವಿಟರ್‌ ಶುಭಾಶಯಗಳು ಸಂದಿವೆ.

ಅಡೆತಡೆಗಳ ಮಧ್ಯೆಯೇ ತೆರೆಕಂಡ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಈಗ ಯಶಸ್ಸಿನ ಓಟದಲ್ಲಿದೆ. ಒಂದು ದಿನ ತಡವಾಗಿ ಬಂದರೂ, ವಿವಾದಗಳೂ ಚಿತ್ರದ ಪ್ರಚಾರಕ್ಕೆ ನೆರವಾಗಿದ್ದು ಹೌದು. ಇದೀಗ ಸಿನಿಮಾ ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ನಟ ಸುದೀಪ್‌ ಗೆಲುವಿನ ನಗೆ ಬೀರಿದ್ದಾರೆ. ಅವರ ನಲಿವಿನಲ್ಲಿ ವಿವಾಹ ವಾರ್ಷಿಕೋತ್ಸವದ ಸಂಭ್ರಮವೂ ಸೇರಿಕೊಂಡಿದೆ. ಸುದೀಪ್‌ ಅವರು ಪ್ರಿಯಾರನ್ನು ವರಿಸಿ ನಿನ್ನೆಗೆ ಇಪ್ಪತ್ತು ವರ್ಷ. ಇವರಿಬ್ಬರ ಕಾಮನ್‌ ಫ್ರೆಂಡ್‌ ಒಬ್ಬರು ಹಾಡೊಂದರ ಮೂಲಕ ದಂಪತಿಗೆ ಶುಭ ಕೋರಿದ್ದರು. ಈ ಹಾಡನ್ನು ಟ್ವೀಟ್ ಮಾಡಿರುವ ಸುದೀಪ್‌ ಪತ್ನಿ ಪ್ರಿಯಾ ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. “ಇಪತ್ತು ವರ್ಷಗಳು ಕಳೆದೇ ಹೋದವು! ಸಮಯ ಹೋಗಿದ್ದೇ ಅರಿವಿಲ್ಲ!” ಎಂದು ಪತ್ನಿಯೊಂದಿಗಿನ ಫೋಟೋ ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್‌. ಈ ಸಂಭ್ರಮದ ಕ್ಷಣದಲ್ಲಿ ನಟ – ನಿರ್ದೇಶಕ ರಿಷಬ್ ಶೆಟ್ಟಿ, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವರು ಹಾಗೂ ಅಭಿಮಾನಿಗಳು ಸುದೀಪ್‌ – ಪ್ರಿಯಾ ದಂಪತಿಗೆ ಟ್ವೀಟ್‌ಗಳ ಮೂಲಕ ಶುಭಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here