ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರದ ಒಂದೊಂದೇ ಪಾತ್ರಗಳನ್ನು ರಿವೀಲ್ ಮಾಡುತ್ತಾ ಸಿನಿಪ್ರಿಯರ ಕುತೂಹಲ ಹೆಚ್ಚುಮಾಡುತ್ತಿದೆ ಚಿತ್ರತಂಡ. ಇಂದು ‘ಆರಕ’ ಪಾತ್ರದ ಲುಕ್ ಹೊರಗೆಡಹಿದೆ.

‘ಭಜರಂಗಿ 2’ ಚಿತ್ರದ ನಿರ್ದೇಶಕ ಎ.ಹರ್ಷ “ನಮ್ಮ ಚಿತ್ರದ ಮತ್ತೊಂದು ಪಾತ್ರ ‘ಆರಕ – ದಿ ಡೆಮನ್‌’ ಪರಿಚಯಿಸುತ್ತಿದ್ದೇವೆ” ಎಂದು ಹೊಸ ಪಾತ್ರದ ಪೋಸ್ಟರ್ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದ ಸೋಷಿಯಲ್ ಮೀಡಿಯಾ ಪೇಜ್‌ಗಳು, ಚಿತ್ರತಂಡದ ಇತರರು ಹಾಗೂ ಅಭಿಮಾನಿಗಳು ಕೂಡ ಈ ಪೋಸ್ಟರ್ ಶೇರ್ ಮಾಡಿದ್ದಾರೆ. ಶಿವರಾಜಕುಮಾರ್ ಅಭಿನಯದ ಯಶಸ್ವೀ ‘ಭಜರಂಗಿ’ ಸರಣಿ ಸಿನಿಮಾ ‘ಭಜರಂಗಿ 2’ ವಿಶಿಷ್ಟ – ವಿಕ್ಷಿಪ್ತ ಪಾತ್ರಗಳ ಮೂಲಕ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇಂದು ಪರಿಚಯವಾಗಿರುವ ‘ಆರಕ’ ಪಾತ್ರದ ಇನ್ನಿತರೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಮೈತುಂಬಾ ಟ್ಯಾಟೂ ಹಾಕಿಕೊಂಡಿರುವ, ಉದ್ದನೆಯ ಜಟೆಯ ಈ ಪಾತ್ರದ ಪರಿಚಯವನ್ನು ತೆರೆಯ ಮೇಲೆಯೇ ನೋಡಿ ಎಂದಿದ್ದಾರೆ ನಿರ್ದೇಶಕ ಹರ್ಷ.

ಶಿವರಾಜಕುಮಾರ್ ಅಭಿನಯದ ‘ಭಜರಂಗಿ2’ ಸಿನಿಮಾ ಮುಂದಿನ ವಾರ ಅಕ್ಟೋಬರ್‌ 29ರಂದು ತೆರೆಕಾಣಲಿದೆ. ಕೋವಿಡ್‌ ನಂತರದ ದಿನಗಳಲ್ಲಿ ಥಿಯೇಟರ್‌ಗೆ ಬರುತ್ತಿರುವ ಮೂರನೇ ದೊಡ್ಡ ಬಜೆಟ್ ಚಿತ್ರವಿದು. ಮೊದಲು ಶಿವರಾಜಕುಮಾರ್‌ ನಂತರ ಶ್ರುತಿ, ಲೋಕಿ, ಭಾವನಾರ ಪಾತ್ರಗಳನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಲಿರಿಕಲ್ ವೀಡಿಯೋ ಕೂಡ ಶಿವರಾಜಕುಮಾರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆ.ಕಲ್ಯಾಣ್ ಗೀತರಚನೆ, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಈ ಹಾಡಿಗೆ ಕೈಲಾಶ್ ಖೇರ್ ದನಿಯಾಗಿದ್ದರು. ಇದೀಗ ‘ಆರಕ’ ಎನ್ನುವ ವಿಚಿತ್ರ ಹೆಸರಿನ ಪಾತ್ರದ ಲುಕ್ ಹೊರಬಿದ್ದಿದೆ. ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣದ ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

Previous article‘ತಲೈವಿ’ ನಂತರ ಸ್ಪೈ-ಥ್ರಿಲ್ಲರ್ ‘ಧಾಕಡ್’; ‘ಏಜೆಂಟ್ ಅಗ್ನಿ’ಯಾಗಿ ಕಂಗನಾ
Next articleಷಡ್ಯಂತ್ರ ಮಾಡಿದರೂ ಗೆದ್ದಿದ್ದೇವೆ; ‘ಸಲಗ’ ನಿರ್ಮಾಪಕ ಶ್ರೀಕಾಂತ್

LEAVE A REPLY

Connect with

Please enter your comment!
Please enter your name here