ನಟ ಅಭಿಷೇಕ್‌ ಅಂಬರೀಶ್‌ ಇಂದು ತಮ್ಮ ಬಹುಕಾಲದ ಗೆಳತಿ ಅವಿವಾ ಬಿದ್ದಪ್ಪ ಅವರನ್ನು ವರಿಸಿದರು. ದಕ್ಷಿಣ ಭಾರತ ಚಿತ್ರರಂಗಗಳ ಪ್ರಮುಖರು, ಸ್ಯಾಂಡಲ್‌ವುಡ್‌ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ಶುಭಹಾರೈಸಿದರು.

ಯುವ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಅವರ ವಿವಾಹ ಇಂದು ನೆರವೇರಿದೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಒಕ್ಕಲಿಗ ಸಮುದಾಯದ ಶಾಸ್ತ್ರಗಳಂತೆ ಮದುವೆ ನಡೆದಿದ್ದು, ಎರಡೂ ಕುಟುಂಬಗಳ ಆಪ್ತರು ಪಾಲ್ಗೊಂಡಿದ್ದರು. ನಟ ಅಂಬರೀಶ್‌ ಅವರು ದಕ್ಷಿಣ ಭಾರತ ಸಿನಿಮಾರಂಗದಲ್ಲಿ ದೊಡ್ಡ ಗೆಳೆಯರ ಬಳಗ ಹೊಂದಿದ್ದವರು. ಇಂದು ಅಭಿಷೇಕ್‌ ಮದುವೆಗೆ ರಜನಿಕಾಂತ್​, ಮೋಹನ್​ ಬಾಬು, ಸುಹಾಸಿನಿ ಮಣಿರತ್ನಂ ಸೇರಿದಂತೆ ಹಲವು ಆಗಮಿಸಿದ್ದರು. ಸ್ಯಾಂಡಲ್‌ವುಡ್‌ನಿಂದ ಸುದೀಪ್‌, ಯಶ್‌, ಪವಿತ್ರಾ ಲೋಕೇಶ್‌, ನರೇಶ್‌, ಅಶ್ವಿನಿ ಪುನೀತ್‌ ರಾಜಕುಮಾರ್‌, ಮೇಘನಾ ರಾಜ್‌ ಸೇರಿದಂತೆ ಹಲವರು ಆಗಮಿಸಿ ನವ ದಂಪತಿಗೆ ಶುಭ ಕೋರಿದರು. ಕ್ರಿಕೆಟರ್‌ ಅನಿಲ್‌ ಕುಂಬ್ಳೆ ಹಾಗೂ ವೆಂಕಯ್ಯನಾಯ್ಡು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಸಮಾರಂಭಕ್ಕೆ ಸಾಕ್ಷಿಯಾದರು. ನಾಡಿದ್ದು ಜೂನ್‌ 7ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆ ಆಯೋಜನೆಗೊಂಡಿದೆ.

Previous articleನರೇಶ್‌ – ಪವಿತ್ರಾ ಲೋಕೇಶ್‌ ‘ಮತ್ತೆ ಮದುವೆ’ ಜೂನ್‌ 9ಕ್ಕೆ
Next article‘ಜೀ ಕರ್ದಾ’ ಟೀಸರ್‌ | ತಮನ್ನಾ ಭಾಟಿಯಾ ಚೊಚ್ಚಲ ವೆಬ್‌ ಸರಣಿ

LEAVE A REPLY

Connect with

Please enter your comment!
Please enter your name here