ಬಹುಭಾಷಾ ತಾರೆ ತಮನ್ನಾ ನಟನೆಯ ಚೊಚ್ಚಲ ಹಿಂದಿ ವೆಬ್ ಸರಣಿ ‘ಜೀ ಕರ್ದಾ’ ಟೀಸರ್ ಬಿಡುಗಡೆಯಾಗಿದೆ. ಆಶಿಮ್ ಗುಲಾಟಿ ಮುಖ್ಯ ಪಾತ್ರದಲ್ಲಿದ್ದಾರೆ. ಈ ಸರಣಿ ಜೂನ್ 15ರಿಂದ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ.
ತಮ್ಮ ಚೊಚ್ಚಲ ವೆಬ್ ಸರಣಿ ‘ಜೀ ಕರ್ದಾ’ ಟೀಸರ್ ಹಂಚಿಕೊಂಡಿದ್ದಾರೆ ನಟಿ ತಮನ್ನಾ. ಈ ಸರಣಿ ಮೂಲಕ ಅವರು OTT ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುತ್ತಿದ್ದಾರೆ. ಇದು ಏಳು ಬಾಲ್ಯಸ್ನೇಹಿತರ ಕತೆ. ಇವರಲ್ಲಿ ಇಬ್ಬರ ಮಧ್ಯೆ ಕುಡಿದ ಮತ್ತಿನಲ್ಲಿ ಮ್ಯಾರೇಜ್ ಪ್ರೊಪೋಸಲ್ ನಡೆಯುತ್ತದೆ. ಆದರೆ ಮದುವೆ ಸಮಾರಂಭ ನಡೆಯುವ ಹೊತ್ತಿಗೆ, ಈ ನಿರ್ಧಾರ ತಪ್ಪು ಎನ್ನುವುದು ಇಬ್ಬರಿಗೂ ಮನವರಿಕೆಯಾಗುತ್ತಾ ಹೋಗುತ್ತದೆ. ನಟ ಆಶಿಮ್ ಗುಲಾಟಿ ಸರಣಿಯಲ್ಲಿ ತಮನ್ನಾರ ಪ್ರಿಯತಮನಾಗಿ ಕಾಣಿಸಿಕೊಂಡಿದ್ದಾರೆ.
ಏಳು ಆಪ್ತ ಸ್ನೇಹಿತರ ಸೀನ್‌ನೊಂದಿಗೆ ಟೀಸರ್ ಓಪನ್ ಆಗುತ್ತದೆ. ಕುಡಿದ ಮತ್ತಿನಲ್ಲಿ ಪ್ರೊಪೋಸ್ ಮಾಡುವುದು, ಈ ಪ್ರಸ್ತಾಪ ಮದುವೆವರೆಗೂ ಹೋಗುವುದು, ಇಬ್ಬರ ಮಧ್ಯೆಯ ಗೊಂದಲಗಳು ಟೀಸರ್‌ನಲ್ಲಿ ಕಾಣಿಸುತ್ತವೆ. ನಟಿ ತಮನ್ನಾ ಟೀಸರ್ ಹಂಚಿಕೊಂಡು, ‘Gen-z peeps, watch and don’t learn.” Actor Kajal Aggarwal commented on her post, “Looks such fun ! can’t wait to watch’ ಎಂದು ಬರೆದಿದ್ದಾರೆ. ‘ಜೀ ಕರ್ದಾ’ ಸರಣಿ ಜೊತೆ ತಮನ್ನಾ ಸಿನಿಮಾ ಚಿತ್ರೀಕರಣದಲ್ಲೂ ಬಿಝಿಯಾಗಿದ್ದಾರೆ. ರಜನೀಕಾಂತ್‌ರ ‘ಜೈಲರ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇನ್ನು ಆಶಿಮ್ ಗುಲಾಟಿ ಸದ್ಯ ‘Taj: Reign of Revenge’ ಸರಣಿ ಯಶಸ್ಸಿನಲ್ಲಿದ್ದಾರೆ. ಇದರ ಸೀಕ್ವೆಲ್ ಈಗ ಸ್ಟ್ರೀಮ್ ಆಗುತ್ತಿದೆ. ಅರುಣಿಮಾ ಶರ್ಮಾ ನಿರ್ದೇಶನದ ‘ಜೀ ಕರ್ದಾ’ ಸರಣಿ ಜೂನ್ 15ರಿಂದ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.