ಇದು ಕಂಟೆಂಟ್‌ ಬೇಸ್ಡ್‌ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಎಸ್‌.ಎಸ್‌.ಸಜ್ಜನ್‌. ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಅಚ್ಯುತ್‌ ಕುಮಾರ್‌ ಇಲ್ಲಿ ಹೀರೋ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಫೆ.11ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಪೋಷಕ, ಖಳ ಪಾತ್ರಗಳಲ್ಲಿ ಗಮನ ಸೆಳೆದಿದ್ದ ಅಚ್ಯುತ್ ಕುಮಾರ್ ‘ಫೋರ್‌ ವಾಲ್ಸ್‌’ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಫ್ಯಾಮಿಲಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಒಂದು ಕುಟುಂಬದ ಕತೆಯಿದೆ. ತಂದೆ ತನ್ನ ಮಕ್ಕಳ ಬದುಕನ್ನು ಹೇಗೆ ಕಟ್ಟುತ್ತಾನೆ ಎನ್ನುವುದು ಟ್ರೈಲರ್‌ನಲ್ಲಿ ತಿಳಿದುಬರುತ್ತದೆ. ನಟ ಅಚ್ಯುತ್‌ ಇಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್‌ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೈಲರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಟೆಂಟ್‌ ಬೇಸ್ಡ್‌ ಸಿನಿಮಾಗಳು ಕನ್ನಡದಲ್ಲೂ ಹೆಚ್ಚೆಚ್ಚು ತಯಾರಾಗುತ್ತಿವೆ ಎಂದು ಕಾಮೆಂಟ್‌ ಮಾಡಿದ್ದಾರೆ. ಎಸ್.ಎಸ್. ಸಜ್ಜನ್ ಕಥೆ ಬರೆದು ನಿರ್ದೇಶಿಸಿರುವ ಸಿನಿಮಾ ಫೆ.11ಕ್ಕೆ ತೆರೆಕಾಣಲಿದೆ. ಡಾ.ಜಾನ್ಹವಿ ರಾಯಲ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ತಾರಾಬಳಗದಲ್ಲಿದ್ದಾರೆ. ಟಿ.ವಿಶ್ವನಾಥ್‌ ನಾಯ್ಕ್‌ ನಿರ್ಮಾಣದ ಸಿನಿಮಾಗೆ ಆನಂದ ರಾಜಾವಿಕ್ರಮ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here