‘Aneka Plus’ OTT ಲಾಂಚ್ ಆಗಿದೆ. ಇದು ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್‌ನ ನೂತನ ಪ್ರಯೋಗ. ಪ್ರೇಕ್ಷಕರಿಗೆ ಗುಣಮಟ್ಟದ ಕಂಟೆಂಟ್ ನೀಡುವುದರ ಜೊತೆಗೆ ಮನರಂಜನಾ ಉದ್ಯಮದ ಸೃಜನಶೀಲರಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ ಈ ಪ್ಲಾಟ್‌ಫಾರ್ಮ್‌.

ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಮಾಧ್ಯಮ ಅನೇಕ’ ಮೀಡಿಯಾ ಹೌಸ್‌ ಗುಣಮಟ್ಟದ ಕಂಟೆಂಟ್‌ ತಯಾರಿಕೆಯೊಂದಿಗೆ ಗಮನ ಸೆಳೆದಿದೆ. ಇಲ್ಲಿ ನಿರ್ಮಾಣವಾದ ಟಾಕ್‌ ಶೋ, ವೆಬ್‌ ಸರಣಿ, ಡಾಕ್ಯುಮೆಂಟರಿ ಸೀರೀಸ್‌ಗಳನ್ನು ಕನ್ನಡಿಗರು ಮೆಚ್ಚಿ ತಲೆದೂಗಿದ್ದಾರೆ. ಈಗ ‘ಮಾಧ್ಯಮ ಅನೇಕ’ ಡಿಜಿಟಲ್‌ ವೇದಿಕೆ ಪ್ರವೇಶಿಸಿದ್ದು ಮೀಡಿಯಾ ಹೌಸ್‌ನಿಂದ ‘Aneka Plus’ OTT ಲಾಂಚ್ ಆಗಿದೆ. ಕನ್ನಡದ ವೈವಿಧ್ಯಮಯ ಒರಿಜಿನಲ್‌ ಕಂಟೆಂಟ್‌ ಜೊತೆ ಭಾರತದ ಇತರೆ ಪ್ರಾದೇಶಿಕ ಭಾಷೆಗಳ ಕಂಟೆಂಟ್‌ ಕೂಡ ಇಲ್ಲಿ ಸ್ಟ್ರೀಮ್ ಆಗಲಿದೆ. ಜೊತೆಗೆ ಮನರಂಜನಾ ಉದ್ಯಮದ ಸೃಜನಶೀಲರಿಗೆ ಉತ್ತಮ ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ.

ಮನರಂಜನಾ ಉದ್ಯಮದಲ್ಲಿ OTT ಗಳು ಇಂದು ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿವೆ. ಜಾಗತಿಕ ಓಟಿಟಿಗಳ ಜೊತೆ ಭಾರತದಲ್ಲಿ ಪ್ರಾದೇಶಿಕವಾಗಿಯೂ ಚಾಲ್ತಿಯಲ್ಲಿರುವ ಕೆಲವು ಓಟಿಟಿಗಳನ್ನು ನಾವು ನೋಡಬಹುದು. ಉತ್ತಮ ಗುಣಮಟ್ಟದ ಜೊತೆ ವೈವಿಧ್ಯಮಯ ಕಂಟೆಂಟ್‌ ಕೊಡುವ ಸಕ್ರಿಯ ಕನ್ನಡದ OTT ವೇದಿಕೆಯೊಂದರ ಅಗತ್ಯ ಇಂದಿನ ತುರ್ತಾಗಿತ್ತು. ಈ ಹಿನ್ನೆಲೆಯಲ್ಲಿ ‘ಮಾಧ್ಯಮ ಅನೇಕ’ ತನ್ನ ‘Aneka Plus’ OTT ಲಾಂಚ್‌ ಮಾಡಿದೆ. ಇದೀಗ ಪ್ಲಾಟ್‌ ಫಾರ್ಮ್‌ ಲೈವ್‌ ಆಗಿದ್ದು Android Playstore, iOS App Store ಮತ್ತು www.anekaplus.com ವೆಬ್‌ಸೈಟ್‌ನಲ್ಲಿ ನೀವು ‘Aneka Plus’ ವೀಕ್ಷಿಸಬಹುದು.

ಜಾಗತಿಕ OTT ಪ್ಲಾಟ್‌ಫಾರ್ಮ್‌ಗಳಲ್ಲೀಗ ಮಾಹಿತಿಯ ಮಹಾಪೂರವನ್ನೇ ನಾವು ನೋಡಬಹುದು. ಪ್ರಾದೇಶಿಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ, ಕಲೆ ಕುರಿತಂತೆ ವೆಬ್‌ ಸರಣಿ, ಸಾಕ್ಷ್ಯಚಿತ್ರ, ಸಿನಿಮಾ ಮಾಡಲು ಹೇರಳವಾದ ಕಂಟೆಂಟ್‌ ನಮಗೆ ಲಭ್ಯವಿದೆ. ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ದೈತ್ಯರಾದ Amazon Prime Video, Netflix ಮತ್ತು Hotstar ಮುಂತಾದವುಗಳಿಂದ ಕನ್ನಡದ ಕಂಟೆಂಟ್‌ ನಿರೀಕ್ಷಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕನ್ನಡದ ಹೆಚ್ಚೆಚ್ಚು ಒರಿಜಿನಲ್‌ ಕಂಟೆಂಟ್‌ ತಯಾರಿಸುವ ನಿಟ್ಟಿನಲ್ಲಿ ‘Aneka Plus’ ಕಾರ್ಯಯೋಜನೆ ರೂಪಿಸಿದೆ. ಮೀಡಿಯಾ ಹೌಸ್‌ನ in-house-productions ಗಳು ‘Maadhyama Aneka Originals’ ಶೀರ್ಷಿಕೆಯಡಿ ಸ್ಟ್ರೀಮ್ ಆಗಲಿವೆ. ಉಳಿದಂತೆ ಹೊರಗಿನ ಸಾಕಷ್ಟು ಕಂಟೆಂಟ್ ‘Aneka Plus’ ಗೆ ತಯಾರಾಗಲಿದೆ.

OTT ವೇದಿಕೆಗಳು ಮುಂಚೂಣಿಗೆ ಬರುತ್ತಿದ್ದಂತೆ ಸಿನಿಮಾ ಹಾಗೂ ಕಿರುತೆರೆ ಉದ್ಯಮದಲ್ಲಿ ಪಲ್ಲಟಗಳಾಗಿವೆ. ಅದರಲ್ಲೂ ಕೋವಿಡ್‌ ದಿನಮಾನಗಳ ನಂತರ ಸಿನಿಮೋದ್ಯಮದ ವಾಣಿಜ್ಯ ವಹಿವಾಟು ತೀರಾ ಹಿನ್ನೆಡೆ ಅನುಭವಿಸುವಂತಾಯ್ತು. ಆಗ ಮನರಂಜನಾ ಮಾಧ್ಯಮದಲ್ಲಿ ಕೆಲಸ ಮಾಡುವ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರಿಗೆ OTT ವೇದಿಕೆ ಪರ್ಯಾಯವಾಯ್ತು. ಅವರು ತಮ್ಮ ಸೃಜನಶೀಲತೆಯನ್ನು ಓಟಿಟಿಗೆ ಧಾರೆ ಎರೆಯುತ್ತಿದ್ದಾರೆ. ದೊಡ್ಡ ಪರದೆಗೆ ಹೊಂದದ ಇಲ್ಲವೇ ಕಡಿಮೆ ಬಜೆಟ್‌ನಲ್ಲೇ ಗುಣಮಟ್ಟದ ಕಂಟೆಂಟ್‌ ಕೊಡಲು ಸಾಧ್ಯವಾಗುವ OTT ವೇದಿಕೆ ಅವರಿಗೆ ಆಪ್ತವಾಗಿದೆ. ಇಲ್ಲಿನ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳುವ ಯೋಜನೆ ‘Aneka Plus’ ನದ್ದು. ನಮ್ಮ ಚಿತ್ರನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರ ಸೃಜನಶೀಲತೆಗೆ ಇಂಬು ನೀಡುವ ಹಾದಿಯಲ್ಲಿ OTT ಕೆಲಸ ಮಾಡಲಿದೆ.

ಕನ್ನಡದ ಪ್ರತಿಭಾವಂತ ಆಸಕ್ತ ಚಿತ್ರಕಥಾ ಬರಹಗಾರರು, ಕತೆಗಾರರು ತಮ್ಮ ಯಾವುದೇ ಕಥಾವಸ್ತುವನ್ನಾಗಲಿ ಅಥವಾ ತಮ್ಮ ಸಿದ್ಧ ಚಿತ್ರಕಥೆ / ಪರಿಕಲ್ಪನೆಗಳನ್ನು ‘ಮಾಧ್ಯಮ ಅನೇಕ’ ಕಂಟೆಂಟ್ ಕ್ಯುರೇಟರ್‌ಗಳಿಗೆ ಕಳುಹಿಸಬಹುದು. ಇದರ ವಸ್ತು, ವಿಷಯ ವೆಬ್ ಸರಣಿ ಅಥವಾ ಡಾಕ್ಯುಮೆಂಟರಿಗೆ ಪೂರಕವಾಗಿರುವುದು ಅವಶ್ಯ. ‘Aneka Plus’ ಜೊತೆಗೂಡಿ ಅವರು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು. ಇಂದಿನ ಸ್ಟ್ರೀಮಿಂಗ್ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ‘ಮಾಧ್ಯಮ ಅನೇಕ’ ದೂರದೃಷ್ಟಿಯಿಂದ ಆರಂಭಿಸಿರುವ OTT ‘Aneka Plus’. ಕಳೆದ ನಾಲ್ಕು ವರ್ಷಗಳ ಪೂರ್ವಸಿದ್ಧತೆ, ಪರಿಶ್ರಮದಿಂದ ‘Aneka Plus’ ರೂಪುಗೊಂಡಿದ್ದು ಕನ್ನಡಿಗರಿಗೆ ಈ ಪ್ರಯತ್ನ ಇಷ್ಟವಾಗಲಿದೆ ಎನ್ನುವ ಭರವಸೆ ಹೊಂದಿದೆ ‘ಮಾಧ್ಯಮ ಅನೇಕ’.

ಮಾಧ್ಯಮ ಅನೇಕ ಪ್ರೈ ಲಿ. ಕುರಿತು..

2018ರಿಂದ ಕಾರ್ಯಾಚರಣೆ ಆರಂಭಿಸಿರುವ ‘ಮಾಧ್ಯಮ ಅನೇಕ ಪ್ರೈವೇಟ್ ಲಿಮಿಟೆಡ್’ ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್. ಮನರಂಜನೆ ಮತ್ತು infotainment ವಿಭಾಗಗಳಿಗೆ ಮೌಲ್ಯಾಧಾರಿತ, ಕಾಲಮಾನಕ್ಕೆ ತಕ್ಕಂತೆ ಮತ್ತು ಉತ್ತಮ ಗುಣಮಟ್ಟದ content ತಯಾರಿಸುವ ದೃಷ್ಟಿಯೊಂದಿಗೆ ಕಳೆದ ಮೂರು ವರ್ಷಗಳಿಂದ ವೆಬ್ ಆಧಾರಿತ ಮನರಂಜನಾ ವಸ್ತು, ಸಾಕ್ಷ್ಯಚಿತ್ರಗಳು ಮತ್ತು Talk Showಗಳನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸುತ್ತಾ ಬಂದಿದೆ.

‘ಬಿಚ್ಚಿಟ್ಟ ಬುತ್ತಿ – web ಸಂಭಾಷಣೆ’ ಮಾಧ್ಯಮ ಅನೇಕ ನಿರ್ಮಾಣದ ಮೊಟ್ಟಮೊದಲ ಪ್ರಸ್ತುತಿ. 2018ರಲ್ಲಿ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಿನಿಮಾ, ಸಂಗೀತ, ನಾಟ್ಯ, ಕೃಷಿ, ರಂಗಭೂಮಿ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳ ಸಾಧನೆ ದಾಖಲಿಸುವುದು ಮೂಲ ಉದ್ದೇಶ. ಸಂದರ್ಶನಗಳ ಮೂಲಕ ಅಪೂರ್ವ ವ್ಯಕ್ತಿತ್ವಗಳ ವಿಸ್ತಾರ ಪರಿಚಯ ಈ ಕಾರ್ಯಕ್ರಮದಲ್ಲಿ ದೊರೆಯುತ್ತದೆ.

ಜೊತೆಜೊತೆಗೆ ಸಾಕ್ಷ್ಯಚಿತ್ರಗಳನ್ನು ಕೂಡ ‘ಮಾಧ್ಯಮ ಅನೇಕ’ ನಿರ್ಮಿಸಿದ್ದು ಅವುಗಳಲ್ಲಿ ಮುಖ್ಯವಾದವು ‘ತೇಜಸ್ವಿ ಎಂಬ ವಿಸ್ಮಯ’, ‘Marie Curie – An Inspiration for All Times’, ‘A Tribute to M.S.Sathyu’. ಇತ್ತೀಚೆಗೆ ಮತ್ತೊಂದು ಸಾಕ್ಷ್ಯಚಿತ್ರ ಸರಣಿ ಪ್ರಾರಂಭಿಸಿದ್ದು ‘People Stories’ ಶೀರ್ಷಿಕೆಯಡಿ ನಮ್ಮ ಸುತ್ತಲಿರುವ ಜನಸಾಮಾನ್ಯರ ಅಸಾಮಾನ್ಯ ಬದುಕಿನ ಚಿತ್ರಣ ಬಿಚ್ಚಿಡುವ ಪ್ರಯತ್ನ ನಡೆದಿದೆ. ಇವೆಲ್ಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆಗಳು ಕನ್ನಡ ಭಾಷೆಯ original content ಗೆ ಉದ್ಯಮದಲ್ಲಿ ಇರುವ ಆದ್ಯತೆ ಮತ್ತು ಬೇಡಿಕೆಗೆ ಸಾಕ್ಷಿ. ಇದೀಗ ‘ಮಾಧ್ಯಮ ಅನೇಕ’ದಿಂದ ‘Aneka Plus’ ಆಗಿದ್ದು, ವೆಬ್ ಎಂಟರ್‌ಟೇನ್‌ಮೆಂಟ್‌ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು. ವೀಕ್ಷಕರಿಗೆ, content producers ಗಳಿಗೆ, ಚಿತ್ರನಿರ್ದೇಶಕ – ನಿರ್ಮಾಪಕರಿಗೆ, ಕ್ರಿಯಾಶೀಲ ಬರಹಗಾರರಿಗೆ ಇದೊಂದು ಅಪೂರ್ವ ವೇದಿಕೆಯಾಗಲಿದೆ.

LEAVE A REPLY

Connect with

Please enter your comment!
Please enter your name here