ಸುದರ್ಶನ್‌ ಜಿ. ಶೇಖರ್‌ ನಿರ್ದೇಶನದ ‘ಮೆಟಡೋರ್‌’ ಥ್ರಿಲ್ಲರ್‌ ಸಿನಿಮಾ ಇದೇ 27ರಂದು ತೆರೆಕಾಣಲಿದೆ. ಚಿತ್ರದ ಪ್ರೊಮೋಷನ್‌ ಸಾಂಗ್‌ನಲ್ಲಿ ಕವಿತಾ ಗೌಡ ಕಾಣಿಸಿಕೊಂಡಿದ್ದು, ಚಿತ್ರದ ಪಾತ್ರಗಳನ್ನು ಪರಿಚಯಿಸಿದ್ದಾರೆ.

‘ಮೆಟಡೋರ್‌’ ಎನ್ನುವ ವಿಭಿನ್ನ ಶೀರ್ಷಿಕೆಯ ಚಿತ್ರವೊಂದು ಸದ್ದು ಮಾಡುತ್ತಿದೆ. ಕೆಲ ತಿಂಗಳ ಹಿಂದೆ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಟ ಧನಂಜಯ್ ಈ ಸಿನಿಮಾದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರಿಲೀಸ್ ಆಗಿರುವ ಸಿನಿಮಾದ ಪ್ರಮೋಷನಲ್ ಹಾಡು ಯೂಟ್ಯೂಬ್‌ನಲ್ಲಿ ಸೌಂಡ್ ಮಾಡ್ತಿದೆ. ‘ಗಾಂಧಾರಿ’ ಎಂದು ಶುರುವಾಗುವ ಹಾಡಿಗೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದು ಮ್ಯೂಸಿಕ್ ನೀಡಿದ್ದಾರೆ. ಅಪೂರ್ವ ಶ್ರೀಧರ್ ಧ್ವನಿಯಾಗಿರುವ ಈ ಹಾಡಿನಲ್ಲಿ ನಟಿ ಕವಿತಾ ಗೌಡ ಮಿಂಚಿದ್ದಾರೆ. ಈ ಹಿಂದೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸುದರ್ಶನ್ ಜಿ. ಶೇಖರ್ ‘ಮೆಟಡೋರ್’ ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಐದು ಕಥೆಯನ್ನು ಹೇಳುವ ಚಿತ್ರದಲ್ಲಿ ಕಿರಣ್, ರವಿ ಮೈಸೂರು, ರಾಜ ಕರ್ಮ, ಅರ್ಚನಾ ಮಹೇಶ್, ಮೋಹನ್ ಬಾಬು ಸೇರಿದಂತೆ ಹೊಸ ಕಲಾವಿದರ ಬಳಗವಿದೆ. ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಡಿ ಕಿರಣ್ ಕುಮಾರ್ ಹೆಚ್.ಎಸ್. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಿನಿಮಾ ಮೇ 27ರಂದು ತೆರೆಗೆ ಬರುತ್ತಿದ್ದು, ಸದ್ಯ ಹಾಡು ರಿಲೀಸ್ ಮಾಡುವ ಮೂಲಕ ಪ್ರಮೋಷನ್‌ಗೆ ಮುನ್ನುಡಿ ಬರೆದಿದೆ.

Previous article‘ಕೊಡಲು ಕೊಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ?’
Next articleನ್ಯೂಯಾರ್ಕ್‌ ಫಿಲ್ಮ್‌ ಫೆಸ್ಟಿವಲ್‌ಗೆ ಡಿ.ಸತ್ಯಪ್ರಕಾಶ್‌ ‘Man Of The Match’

LEAVE A REPLY

Connect with

Please enter your comment!
Please enter your name here