ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕಥೆ ರಚಿಸಿರುವ ಅಜಯ್‌ ಕುಮಾರ್‌ ಪುತ್ರ ಅರ್ಜುನ್‌ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಶ್ರೀನಿವಾಸ್‌ಮೂರ್ತಿ ನಿರ್ದೇಶನದ ಅಂಡರ್‌ವರ್ಲ್ಡ್‌ – ಲವ್‌ ಸ್ಟೋರಿ ಇದು. ಯಶ್ವಿಕಾ ನಿಷ್ಕಲ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅರ್ಜುನ್‌ ಮತ್ತು ಯಶ್ವಿಕಾ ನಿಷ್ಕಲ ಜೋಡಿಯ ‘ಗನ್ಸ್‌ ಅಂಡ್‌ ರೋಸಸ್‌’ ಸಿನಿಮಾ ಸೆಟ್ಟೇರಿದೆ. ಹಲವು ಯಶಸ್ವೀ ಸಿನಿಮಾಗಳ ಕತೆಗಾರ ಅಜಯ್‌ ಕುಮಾರ್‌ ಅವರ ಪುತ್ರ ಅರ್ಜುನ್‌. ‘ಹಲವಾರು ವರ್ಷಗಳಿಂದ ಕನ್ನಡಿಗರು ನನಗೆ ಪ್ರೋತ್ಸಾಹ ನೀಡಿ ಬೆಂಬಲಿಸಿದ್ದಾರೆ. ಪುತ್ರ ಅರ್ಜುನ್‌ಗೂ ಬೆಂಬಲವಿರಲಿ’ ಎನ್ನುತ್ತಾರೆ ಅಜಯ್‌ ಕುಮಾರ್‌. ಅವರ ಸ್ನೇಹಿತರೇ ಆದ ಎಚ್‌ ಆರ್‌ ನಟರಾಜ್‌ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ‘ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ‌. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎನ್ನುವ ಷರತ್ತು ಹಾಕಿದ್ದೇನೆ. ಈ ವರ್ಷದ ಕೊನೆಗೆ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ನಿರ್ಮಾಪಕ ನಟರಾಜ್‌.

ನಾಯಕನಟ ಅರ್ಜುನ್‌, ‘ಇದು ನನ್ನ ಮೊದಲ ಸಿನಿಮಾ. ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಅಗತ್ಯವಿರುವ, ಪಾತ್ರಕ್ಕೆ ತೂಕವಿರುವ ಸ್ಕ್ರಿಪ್ಟ್‌ ಸಿಕ್ಕಿದೆ. ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ’ ಎನ್ನುತ್ತಾರೆ. ಹಲವು ವರ್ಷಗಳಿಂದ ಸಹನಿರ್ದೇಶಕನಾಗಿ ಕೆಲಸ ಮಾಡಿ ಅನುಭವವಿರುವ ಶ್ರೀನಿವಾಸ್‌ ಮೂರ್ತಿ ಅವರ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರವಿದು. ಯಶ್ವಿಕ ನಿಷ್ಕಲ ಈ ಚಿತ್ರದ ನಾಯಕಿ. ಶಶಿಕುಮಾರ್ ಸಂಗೀತ, ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕೆ ಇರಲಿದೆ. ಶರತ್‌ ಚಿತ್ರದ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

Previous article‘ಜಲಪಾತ’ದಲ್ಲಿನ ಪ್ರಮೋದ್‌ ಲುಕ್‌ ರಿವೀಲ್‌ ಮಾಡಿದ ನಟನ ತಾರಾಪತ್ನಿ ಸುಪ್ರೀತಾ
Next articleಬೆಂಗಳೂರಿನ ಜಯನಗರ BMTC ಡಿಪೋಗೆ ರಜನೀಕಾಂತ್‌ ಸರ್ಪ್ರೈಸ್‌ ವಿಸಿಟ್‌

LEAVE A REPLY

Connect with

Please enter your comment!
Please enter your name here