ಜೀವ ಎಲ್‌ ಜೆ ನಿರ್ದೇಶನದ ‘ಅಲೆಕ್ಸಾ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೊಂದು ಮರ್ಡರ್‌ ಮಿಸ್ಟರಿ ಕಥಾಹಂದರದ ಸಿನಿಮಾ. ಶೀರ್ಷಿಕೆ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದೇ ಡಿಸೆಂಬರ್ 29ರಂದು ಸಿನಿಮಾ ತೆರೆಕಾಣುತ್ತಿದೆ.

ಅದಿತಿ ಪ್ರಭುದೇವ ಮತ್ತು ಪವನ್ ತೇಜ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಅಲೆಕ್ಸಾ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಲನಚಿತ್ರವನ್ನು ಜೀವ L J ನಿರ್ದೇಶಿಸಿದ್ದಾರೆ. ”ಇದು ಮರ್ಡರ್ ಮಿಸ್ಟರಿ ಕಥಾಹಂದರ. ‘ಭುಜಂಗ’ ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರ. ಚಿತ್ರತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ” ಎಂದಿದ್ದಾರೆ ನಿರ್ದೇಶಕರು. ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಅದಿತಿ ಪ್ರಭುದೇವ, ‘ನಾನು ಚಿತ್ರದಲ್ಲಿ ತನಿಖಾ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ. ಅಲೆಕ್ಸಾ ನನ್ನ ಪಾತ್ರದ ಹೆಸರು. ನನಗೆ ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಚಿತ್ರದಲ್ಲಿ ನಾನು ರಿಸ್ಕೀ ಆಕ್ಷನ್‌ ಸೀನ್‌ಗಳಲ್ಲಿ ಪರ್ಫಾರ್ಮ್‌ ಮಾಡಿದ್ದೇನೆ’ ಎನ್ನುತ್ತಾರೆ. ವಿ ಚಂದ್ರು ನಿರ್ಮಾಣದ ಚಿತ್ರದಲ್ಲಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸತೀಶ್ ಚಂದ್ರ ಛಾಯಾಗ್ರಾಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ. ಇದೇ ಡಿಸೆಂಬರ್ 29ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here