ಡಾ ಬಿಜು ನಿರ್ದೇಶನದ ‘ಅದೃಶ್ಯ ಜಾಲಕಂಙಳ್’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಟೊವಿನೋ ಥಾಮಸ್‌ ನಿಮಿಷಾ ಸಜಯನ್‌ ಮತ್ತು ಇಂದ್ರನ್ಸ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು 27 ನೇ Tallinn Black Nights International Film Festivalನಲ್ಲಿ ಪ್ರೀಮಿಯರ್‌ ಆಗಲಿದೆ.

ಟೊವಿನೋ ಥಾಮಸ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಅದೃಶ್ಯ ಜಾಲಕಂಙಳ್’ ಮಲಯಾಳಂ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಾ ಬಿಜು ನಿರ್ದೇಶನದ ಈ ಚಿತ್ರದಲ್ಲಿ ನಿಮಿಷಾ ಸಜಯನ್ ಮತ್ತು ಇಂದ್ರನ್ಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 27 ನೇ Tallinn Black Nights International Film Festivalನಲ್ಲಿ ಪ್ರೀಮಿಯರ್‌ ಆಗಲಿದೆ. ಈ ಸಿನಿಮಾ ಯುದ್ಧದ ಹಿನ್ನೆಲೆಯ ಒಂದು ಕಾಲ್ಪನಿಕ ಕಥಾಹಂದರ. ಟ್ರೇಲರ್‌ನಲ್ಲಿ ಟೊವಿನೊ ಪಾತ್ರವು ಅತ್ಯಂತ ನೈಜವಾಗಿ ಮೂಡಿಬಂದಿದೆ. ಮೃತದೇಹಗಳು ತನ್ನೊಂದಿಗೆ ಮಾತನಾಡುತ್ತವೆ ಎಂಬ ಕಲ್ಪನೆಯನ್ನು ಅವನು ಹೊಂದಿರುತ್ತಾನೆ. ಅವನು ವಾಸಿಸುತ್ತಿರುವ ಪ್ರದೇಶವು ಯುದ್ದ ಪೀಡಿದ ಪ್ರದೇಶವಾಗಿರುವುದರಿಂದ ಅಲ್ಲಿ ಸಾವು-ನೋವು ಸಾಮಾನ್ಯವಾಗಿರುವಂತೆ ಅಲ್ಲಿನ ಜನ ಆ ವಾತಾವರಣಕ್ಕೆ ಹೊಂದಿಕೊಂಡಿರುತ್ತಾರೆ. ಯುದ್ದವು ತೀರ್ವಗೊಂಡಾಗ ಪೊಲೀಸರು ಕೈಗೆ ಸಿಕ್ಕ ಜನರನ್ನೆಲ್ಲ ಜೈಲಿಗೆ ಹಾಕುತ್ತಿರುತ್ತಾರೆ. ಚಿತ್ರದಲ್ಲಿ ಟೊವಿನೋ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು Ellanar Films ಬ್ಯಾನರ್‌ ಅಡಿಯಲ್ಲಿ ನವೀನ್‌ ಯರ್ನೇನಿ, ವೈ ರವಿ ಶಂಕರ್‌, ಟೋವಿನೋ ಥಾಮಸ್‌ ಮತ್ತು ರಾಧಿಕಾ ಲಾವು ನಿರ್ಮಿಸಿದ್ದಾರೆ. ‘ಅದೃಶ್ಯ ಜಾಲಕಂಙಳ್’ ಚಿತ್ರದ ಟ್ರೇಲರ್ ಫ್ಯಾಂಟಸಿ ಅಂಶಗಳನ್ನು ಒಳಗೊಂಡಿದೆ. ಡಾ ಬಿಜು ಅವರು ‘ವಲಿಯ ಚಿರಕುಳ್ಳ ಪಕ್ಷಿಕಳ್‌’, ‘ಆಕಾಶತಿಂತೆ ನಿರಮ್’ ಮತ್ತು ‘ವೀತ್ತಿಲೆಕ್ಕುಲ್ಲ ವಾಝಿ’ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಟೊವಿನೋ ಪ್ರಸ್ತುತ ಲಾಲ್ ಜೂನಿಯರ್ ನಿರ್ದೇಶನದ ‘ನಾಡಿಕರ್ ತಿಲಕಂ’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಸುವಿನ್ ಸೋಮಶೇಖರನ್ ಚಿತ್ರಕಥೆ ಬರೆದ ಈ ಚಿತ್ರದಲ್ಲಿ ಸೌಬಿನ್ ಶಾಹಿರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಪೂರ್ಣಗೊಂಡ ನಂತರ ಟೊವಿನೋ ಅವರು ತಮ್ಮ ವೃತ್ತಿಜೀವನದ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ‘ಐಡೆಂಟಿಟಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವು ಹೈ – ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನಲಾಗುತ್ತಿದೆ.

LEAVE A REPLY

Connect with

Please enter your comment!
Please enter your name here