ಪ್ರವೀಣ್‌ ಚಂದ್ರನ್‌ ನಿರ್ದೇಶನದ ‘ಪೆರಿಲ್ಲೂರ್ ಪ್ರೀಮಿಯರ್ ಲೀಗ್’ ಮಲಯಾಳಂ ಬೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ಈ ಕಾಮಿಡಿ ಎಂಟರ್‌ಟೇನರ್‌ ಸರಣಿಯಲ್ಲಿ ‘ತಲ್ಲುಮಾಲಾ’ ಖ್ಯಾತಿಯ ಅದ್ರಿ ಜೋ, ‘ರೋಮಾಂಚಂ’ ಖ್ಯಾತಿಯ ಅಬಿನ್ ಬಿನೋ ಮತ್ತು ಶರತ್ ಸಾಬಾ ವಿಜಯರಾಘವನ್, ಅಶೋಕನ್ ಮತ್ತು ಅಜು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಿಖಿಲಾ ವಿಮಲ್‌ ಮತ್ತು ಸನ್ನಿ ವೇಯ್ನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಪೆರಿಲ್ಲೂರ್ ಪ್ರೀಮಿಯರ್ ಲೀಗ್’ ಮಲಯಾಳಂ ವೆಬ್ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಈ ಸರಣಿಗೆ ದೀಪು ಪ್ರದೀಪ್‌ ಚಿತ್ರಕಥೆಯಿದ್ದು, ಪ್ರವೀಣ್ ಚಂದ್ರನ್ ನಿರ್ದೇಶಿಸಿದ್ದಾರೆ. ಇದೊಂದು ಕಾಮಿಡಿ – ಎಂಟರ್‌ಟೇನರ್‌. ಸರಣಿಯಲ್ಲಿ ‘ತಲ್ಲುಮಾಲಾ’ ಖ್ಯಾತಿಯ ಅದ್ರಿ ಜೋ, ‘ರೋಮಾಂಚಂ’ ಖ್ಯಾತಿಯ ಅಬಿನ್ ಬಿನೋ ಮತ್ತು ಶರತ್ ಸಾಬಾ ವಿಜಯರಾಘವನ್, ಅಶೋಕನ್ ಮತ್ತು ಅಜು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ಒಂದು ಹಳ್ಳಿಯ ಚುನಾವಣೆ ಮತ್ತು ಅದರ ಸುತ್ತ ನಡೆಯುವ ಘಟನೆಗಳ ಮೇಲೆ ಕೇಂದ್ರಿತವಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಪೋಸ್ಟರ್‌ನಲ್ಲಿ ನಿಖಿಲಾ ವಿಮಲ್ ಮತ್ತು ವಿಜಯರಾಘವನ್ ಚುನಾವಣೆಯ ಮತಕ್ಕಾಗಿ ಪ್ರಚಾರ ಮಾಡುವ ರೀತಿ ಕಾಣಿಸಿಕೊಂಡಿದ್ದರು.

ನವೆಂಬರ್‌ನಲ್ಲಿ ಬಿಡುಗಡೆಯಾದ ಮತ್ತೊಂದು ಪೋಸ್ಟರ್ ಪೆರಿಲ್ಲೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಶೋಕನ್ ರಾಜಕಾರಣಿಯಾಗಿ ನಟಿಸಲಿದ್ದಾರೆ ಎಂಬ ಸುಳಿವು ನೀಡಿತ್ತು. ಈ ಸರಣಿಯು ದುಲ್ಕರ್ ಸಲ್ಮಾನ್ ಅವರ ‘ಕುರೂಪ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಅವರ ಚೊಚ್ಚಲ ನಿರ್ದೇಶನದ ಪ್ರಾಜೆಕ್ಟ್‌. ದೀಪು ಈ ಹಿಂದೆ ‘ಗೋಧಾ’ ಮತ್ತು ‘ಪದ್ಮಿನಿ’ ಚಿತ್ರಕ್ಕೆ ಚಿತ್ರಕಥೆ ರಚಿಸಿದ್ದರು. ‘ಪೆರಿಲ್ಲೂರ್ ಪ್ರೀಮಿಯರ್ ಲೀಗ್’ ಸರಣಿಯು ಇದೇ ಡಿಸೆಂಬರ್‌ ಅಥವಾ 2024ರ ಜನವರಿಯ ಆರಂಭದಲ್ಲಿ Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here