ದೀಪಾವಳಿ ಅಂಗವಾಗಿ ‘ಅಖಂಡ’ ತೆಲುಗು ಸಿನಿಮಾ ಚಿತ್ರತಂಡ ಟೈಟಲ್ ಟ್ರ್ಯಾಕ್ ಪ್ರೋಮೊ ಬಿಡುಗಡೆ ಮಾಡಿದೆ. ಬಾಲಕೃಷ್ಣ ನಟನೆಯ ಈ ಬಹುನಿರೀಕ್ಷಿತ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

ನಂದಮೂರಿ ಬಾಲಕೃಷ್ಣ ಅಭಿನಯದ ಆಕ್ಷನ್ ಡ್ರಾಮಾ ‘ಅಖಂಡ’ ಬಹುನಿರೀಕ್ಷಿತ ತೆಲುಗು ಚಿತ್ರಗಳಲ್ಲೊಂದು. ಸದ್ಯ ಬಿಡುಗಡೆಯಾಗಿರುವ ಹೀರೋ ಬಾಲಯ್ಯರ ವಿಶಿಷ್ಟ ವೇಷ – ಭೂಷಣಗಳು ಚಿತ್ರದ ಕುರಿತಾಗಿ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ. ಈಗ ಅವರಿಗೆಂದೇ ಚಿತ್ರತಂಡ ಸಿನಿಮಾದ ಟೈಟಲ್ ಟ್ರ್ಯಾಕ್ ಪ್ರೋಮೊ ಬಿಡುಗಡೆ ಮಾಡಿದೆ. ಬೊಯಪಾಟಿ ಸೀನು ನಿರ್ದೇಶನದ ಚಿತ್ರಕ್ಕೆ ತಮನ್ ಸಂಗೀತ ಸಂಯೋಜನೆಯಿದೆ. ಪ್ರೋಮೊದಲ್ಲಿ ನಟ ಬಾಲಯ್ಯ ‘ಅಘೋರಿ’ಯಾಗಿ ಕಾಣಿಸುತ್ತಿದ್ದು ಚಿತ್ರದ ಕತೆಯ ಕುರಿತಾಗಿ ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ. ಪೂರ್ಣ ಶೀರ್ಷಿಕೆ ಹಾಡು ನವೆಂಬರ್‌ 8ರಂದು ರಿಲೀಸ್ ಆಗಲಿದೆ. ‘ಸಿಂಹ’ ಮತ್ತು ‘ಲೆಜೆಂಡ್‌’ ಯಶಸ್ವೀ ಸಿನಿಮಾಗಳ ನಂತರ ಬೊಯಪಾಟಿ ಸೀನು ಅವರು ಬಾಲಯ್ಯಗೆ ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಪ್ರಜ್ಞಾ ಜಸ್ವಾಲ್ ನಾಯಕಿಯಾಗಿ ನಟಿಸಿದ್ದು, ಶ್ರೀಕಾಂತ್ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಬಾಲಕೃಷ್ಣ ಅವರೀಗ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಜನಪ್ರಿಯ ತೆಲುಗು ಓಟಿಟಿ ‘ಆಹಾ’ದಲ್ಲಿ ಬಾಲಕೃಷ್ಣ ನಿರೂಪಣೆಯಲ್ಲಿ ‘ಅನ್‌ಸ್ಟಾಪಬಲ್‌’ ಶೋ ಸ್ಟ್ರೀಮ್ ಆಗುತ್ತಿದೆ. ಶೋನಲ್ಲಿ ಬಾಲಕೃಷ್ಣ ಅವರು ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳೊಂದಿಗೆ ಮಾತನಾಡಲಿದ್ದಾರೆ. ಬಾಲಕೃಷ್ಣ ಅವರು ಚಿತ್ರರಂಗದ ಸಾಧಕರ ಕತೆಗಳು, ಗೊತ್ತಿರದ ಸಂಗತಿಗಳನ್ನು ಹೇಳಲಿದ್ದಾರೆ. ಸದ್ಯ ಈಗ ‘ಅನ್‌ಸ್ಟಾಪಬಲ್‌’ ಶೋನಲ್ಲಿ ಮಂಚು ಮೋಹನ್ ಬಾಬು ಕುಟುಂಬದೊಂದಿಗಿನ ಬಾಲಕೃಷ್ಣರ ಮಾತುಕತೆ ಸ್ಟ್ರೀಮ್ ಆಗುತ್ತಿದೆ.

Previous articleಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ‘ಅಣ್ಣಾತ್ತೆ’; ನಿರಾಸೆ ಮೂಡಿಸುವ ಸಿನಿಮಾ
Next articleಸ್ವಾಭಿಮಾನದ ಸಂದೇಶ; ‘ಜೈ ಭೀಮ್’ ಸಿನಿಮಾದ ಆಶಯ

LEAVE A REPLY

Connect withPlease enter your comment!
Please enter your name here