ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸ್ಕೈ ಫೋರ್ಸ್’ ಹಿಂದಿ ಸಿನಿಮಾ ಸೆಟ್ಟೇರಿದೆ. ಸಂದೀಪ್ ಕೇಲ್ವಾನಿ ನಿರ್ದೇಶನದ ಚಿತ್ರವನ್ನು Jio Studios ಮತ್ತು Maddock Films ನಿರ್ಮಿಸುತ್ತಿವೆ.
ಭಾರತದ ಮೊದಲ ವೈಮಾನಿಕ ದಾಳಿಯ ಕಥೆ, ‘ಸ್ಕೈ ಫೋರ್ಸ್’ (Sky Force) ದೇಶಭಕ್ತಿ ಹಿಂದಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ನಟ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಚಲನಚಿತ್ರವನ್ನು ಘೋಷಿಸಿದ್ದಾರೆ. ಅಕ್ಷಯ್ ತಮ್ಮ Instagram ಖಾತೆಯಲ್ಲಿ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರಕಟಣೆಯ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. 1965ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಮ್ಮ ದೇಶದ ವಿರುದ್ಧ ಭಾಷಣ ಮಾಡಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್ ಅವರ ಧ್ವನಿಯೊಂದಿಗೆ ಈ ಪ್ರೋಮೋ ಪ್ರಾರಂಭವಾಗುತ್ತದೆ. ‘ಚಂಡಮಾರುತದ ಬಾಂಬ್‌ಗಳ
ಬೆದರಿಕೆಯಿಂದ ನಮ್ಮ ದೇಶವನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಭಾರತ ಸರ್ಕಾರಕ್ಕೆ ನಿಮ್ಮ ಶಸ್ತ್ರಾಸ್ತ್ರಗಳಿಗೆ ನಮ್ಮದೇ ಶಸ್ತ್ರಾಸ್ತ್ರಗಳೊಂದಿಗೆ ಉತ್ತರಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ’ ಎಂದು ಶಾಸ್ತ್ರಿ ಅವರು ಹೇಳಿದ್ದಾರೆ.
ಪ್ರೋಮೋ ಹಂಚಿಕೊಂಡ ಅಕ್ಷಯ್ ‘ಗಾಂಧಿ – ಶಾಸ್ತ್ರೀಜಿ ಜಯಂತಿಯಂದು ಇಡೀ ದೇಶವೇ ‘ಜಯ, ಜಯ, ಜಯ, ಜಯ ಜಯ ವಿಜ್ಞಾನ, ಜಯ ಅನುಸಂಧಾನ’ ಎಂದು ಹೇಳುತ್ತಿದೆ. ‘Sky Force’ ಕಥೆಯು ನೈಜ ಘಟನೆಗಳನ್ನೊಳ್ಳಗೊಂಡ ಭಾರತದ ಮೊದಲ ವೈಮಾನಿಕ ದಾಳಿಯ ಕುರಿತು ಹೇಳಹೊರಟಿದೆ. ನಿಮ್ಮ ಪ್ರೀತಿ ಸಹಕಾರ ನೀಡಿ. ಜೈ ಭಾರತ್’ ಎಂದು ಕ್ಯಾಪ್ಶನ್ ನೀಡಿದ್ದಾರೆ. ನೈಜ ಕಥೆಯಾಧಾರಿತ ಈ ಚಿತ್ರಕ್ಕೆ ಸಂದೀಪ್ ಕೇಲ್ವಾನಿ ನಿರ್ದೇಶನವಿದ್ದು Jio Studios ಮತ್ತು Maddock Films ಬ್ಯಾನರ್ ಅಡಿ ಅಮರ್ ಕೌಶಿಕ್ ನಿರ್ಮಿಸಲಿದ್ದಾರೆ. ಈ ಸಿನಿಮಾ ಅಕ್ಟೋಬರ್ 2, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.