ನಟ ವಿಜಯ್‌ ದೇವರಕೊಂಡ ಇಂದು ತಮ್ಮ ಆಕ್ಷನ್‌ – ಡ್ರಾಮಾ ‘ಲೈಗರ್‌’ ಹಿಂದಿ – ತೆಲುಗು ದ್ವಿಭಾಷಾ ಸಿನಿಮಾದ ಟೀಸರ್‌ ಶೇರ್‌ ಮಾಡಿದ್ದಾರೆ. ಪುರಿ ಜಗನ್ನಾಥ್‌ ನಿರ್ದೇಶನದ ಈ ಸಿನಿಮಾದ ನಾಯಕಿ ಅನನ್ಯಾ ಪಾಂಡೆ.

ಮಿಕ್ಸೆಡ್‌ ಮಾರ್ಷಿಯಲ್‌ ಆರ್ಟ್ಸ್‌ ಹಿಂದಿ – ತೆಲುಗು ದ್ವಿಭಾಷಾ ಸಿನಿಮಾ ‘ಲೈಗರ್‌’ ಸಿನಿಮಾ ಸುದ್ದಿಯಲ್ಲಿದೆ. ಚಿತ್ರದ ಹೀರೋ ವಿಜಯ್‌ ದೇವರಕೊಂಡ ಫಸ್ಟ್‌ ಲುಕ್‌ ವೀಡಿಯೋ ಶೇರ್‌ ಮಾಡಿದ್ದಾರೆ. ‘ಸ್ಲಂಡಾಗ್‌’, ‘ಚಾಯ್‌ವಾಲಾ’ ಎಂದು ಪರಿಚಯವಾಗುವ ದೇವರಕೊಂಡ ಪಾತ್ರದ ಜರ್ನೀ ಮುಂಬಯಿಯಿಂದ ಲಾಸ್‌ ವೆಗಾಸ್‌ವರೆಗೂ ಸಾಗುತ್ತದೆ. ಈ ಹಿಂದಿನ ಅವರ ಯಶಸ್ವೀ ‘ಅರ್ಜುನ್‌ ರೆಡ್ಡಿ’ ಸಿನಿಮಾದ ಇಮೇಜು ಇಲ್ಲಿಯೂ ಮುಂದುವರೆದಿರುವಂತಿದೆ. ಅವರಿಲ್ಲಿ ಮಿಕ್ಸೆಡ್‌ ಮಾರ್ಷಿಯಲ್‌ ಆರ್ಟ್ಸ್‌ (MMA) ಫೈಟರ್‌ ಪಾತ್ರದಲ್ಲಿ ನಟಿಸುತ್ತಿದ್ದು, ರೋನಿತ್‌ ರಾಯ್‌ ಅವರ ಟ್ರೈನರ್‌ ಪಾತ್ರದಲ್ಲಿದ್ದಾರೆ. ಪುರಿ ಜಗನ್ನಾಥ್‌ ನಿರ್ದೇಶನದ ಸಿನಿಮಾದ ಈ ಟೀಸರ್‌ ದುಬಾರಿ ಮೇಕಿಂಗ್‌ ಕುರಿತಂತೆ ಒಂದು ಚಿತ್ರಣ ಕೊಡುತ್ತದೆ. ಬಾಕ್ಸರ್‌ ಮೈಕ್‌ ಟೈಸನ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಟೀಸರ್‌ನಲ್ಲಿ ಅವರ ಕುರಿತ ಸುಳಿವಿಲ್ಲ. ಟಾಮ್‌ ಹಾರ್ಡಿ, ಜೊಯೆಲ್‌ ಎಡ್ಜರ್‌ಟನ್‌ ನಟನೆಯ ‘ವಾರಿಯರ್‌’, ‘ಬ್ರೂಯಿಸ್ಡ್‌’… ಈ ಹಿಂದೆ ತಯಾರಾಗಿದ್ದ ಜನಪ್ರಿಯ MMA ಕುರಿತ ಸಿನಿಮಾಗಳು. ಭಾರತದಲ್ಲಿ ಇಲ್ಲಿಯವರೆಗೆ ಪೂರ್ಣ ಪ್ರಮಾಣದ MMA ಸಿನಿಮಾಗಳು ತಯಾರಾಗಿಲ್ಲ. ಹಾಗಾಗಿ ಸಹಜವಾಗಿಯೇ ವಿಜಯ್‌ ದೇವರಕೊಂಡ ನಟನೆಯ ‘ಲೈಗರ್‌’ ನಿರೀಕ್ಷೆ ಹೆಚ್ಚಿಸಿದೆ. 2022ರ ಆಗಸ್ಟ್‌ 25ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here