ಟಿ ಜೆ ಜ್ಞಾನವೇಲ್‌ ನಿರ್ದೇಶನದಲ್ಲಿ ರಜನೀಕಾಂತ್‌ ನಟಿಸುತ್ತಿರುವ ನೂತನ ತಮಿಳು ಸಿನಿಮಾದಲ್ಲಿ ಫಹಾದ್‌ ಫಾಸಿಲ್‌ ನಟಿಸಲಿದ್ದಾರೆ. ರಿತಿಕಾ ಸಿಂಗ್‌, ದುಶಾರ ವಿಜಯನ್‌, ರಾಣಾ ದಗ್ಗುಬಾಟಿ ಈ ಚಿತ್ರದ ಇತರೆ ಪ್ರಮುಖ ಕಲಾವಿದರು.

ರಜನೀಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ‘ತಲೈವಾ 170’ ಚಿತ್ರದಲ್ಲಿ ಫಹಾದ್ ಫಾಸಿಲ್ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ನಟಿ ಮಂಜು ವಾರಿಯರ್ ಚಿತ್ರದ ತಾರಾಬಳಗ ಸೇರಿಕೊಂಡಿದ್ದು, ಈಗ ಈ ಹೊಸ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. Lyca Productions ಈ ಕುರಿತು ಮಾಹಿತಿಯನ್ನು X (Twitter) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘Welcoming the incredibly versatile talent Mr. Fahadh Faasil on board for Thalaivar 170’ ಎಂದು ಕ್ಯಾಪ್ಶನ್‌ ನೀಡಿದೆ. ಫಹಾದ್‌ ಫಾಸಿಲ್‌, ರಜನೀಕಾಂತ್‌ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಚಿತ್ರದ ಪಾತ್ರವರ್ಗದಲ್ಲಿ ರಿತಿಕಾ ಸಿಂಗ್, ದುಶಾರ ವಿಜಯನ್ ಮತ್ತು ರಾಣಾ ದಗ್ಗುಬಾಟಿ ಕೂಡ ಇದ್ದಾರೆ. ಅಮಿತಾಬ್ ಬಚ್ಚನ್ ಮತ್ತು ನಾನಿ ಕೂಡ ಈ ಯೋಜನೆಯ ಭಾಗವಾಗಲಿದ್ದಾರೆ ಎನ್ನಲಾಗಿದೆ.

https://x.com/LycaProductions/status/1709123634567225747?s=20

ಫಹಾದ್ ಇತ್ತೀಚೆಗೆ ಮಾರಿ ಸೆಲ್ವರಾಜ್ ನಿರ್ದೇಶನದ ತಮಿಳಿನ ‘ಮಾಮಣ್ಣನ್’ ಚಿತ್ರದಲ್ಲಿ ನಟಿಸಿದ್ದರು. ಚಿತ್ರವು ಥಿಯೇಟರ್‌ಗಳಲ್ಲಿ ಉತ್ತಮ ಗಳಿಕೆ ಕಂಡು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಹಾಗೂ ಚಿತ್ರದಲ್ಲಿ ಫಹಾದ್ ಅವರ ಅಭಿನಯವು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಕಮಲ್ ಹಾಸನ್ ಅವರ ‘ವಿಕ್ರಂ’ ಚಿತ್ರದಲ್ಲೂ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವೂ ಸಹ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಕಂಡಿತು. ತ್ಯಾಗರಾಜನ್ ಕುಮಾರರಾಜ ಅವರ ‘ಸೂಪರ್ ಡಿಲಕ್ಸ್’ ಮತ್ತೊಂದು ತಮಿಳು ಚಿತ್ರವಾಗಿದ್ದು, ಇದರಲ್ಲಿ ಫಹಾದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here