Instagram ಜೊತೆ ಕೈಜೋಡಿಸಿದ ದಕ್ಷಿಣ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅಲ್ಲು ಅರ್ಜುನ್‌. ರಾಷ್ಟ್ರಪ್ರಶಸ್ತಿ ಪಡೆದ ನಟ ಅಲ್ಲು ಅರ್ಜುನ್‌ ಮನೆಗೆ ಭೇಟಿ ನೀಡಿದ Instagram ತಂಡ, ಅವರ ದಿನಚರಿಯ ವೀಡಿಯೋ ಶೂಟ್‌ ಮಾಡಿ ಹಂಚಿಕೊಂಡಿದೆ. ನಟನ ಅಭಿಮಾನಿಗಳಿಗೆ ಈ ವೀಡಿಯೋ ಖುಷಿ ತಂದಿದೆ.

ತೆಲುಗು ನಟ ಅಲ್ಲು ಅರ್ಜುನ್‌ ‘ಪುಷ್ಪ’ ಚಿತ್ರದ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ Instagramನಿಂದ ಅವರಿಗೊಂದು ವಿಶೇಷ ಗೌರವ ಸಿಕ್ಕಿದೆ. ಸ್ವತಃ Instagram ತಂಡ ನಟನನ್ನು ಭೇಟಿ ಮಾಡಿ ಅವರ ದಿನಚರಿ ಹಾಗೂ ‘ಪುಷ್ಪ 2’ ತೆಲುಗು ಸಿನಿಮಾ ಚಿತ್ರೀಕರಣದ ವೀಡಿಯೋ ಶೂಟ್‌ ಮಾಡಿ ಪೋಸ್ಟ್‌ ಮಾಡಿದೆ. ಇದರೊಂದಿಗೆ Insta ಜೊತೆ ಕೊಲ್ಯಾಬ್‌ ಆದ ದಕ್ಷಿಣ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅಲ್ಲು ಅರ್ಜುನ್‌. ‘ಪುಷ್ಪ’ ಚಿತ್ರದ ದೊಡ್ಡ ಯಶಸ್ಸಿನ ನಂತರ ಸಿನಿಪ್ರೇಮಿಗಳು ಸೀಕ್ವೆಲ್‌ ಕುರಿತಂತೆ ಉತ್ಸುಕರಾಗಿದ್ದಾರೆ. ಚಿತ್ರತಂಡ ಸೀಕ್ವೆಲ್‌ ಕುರಿತ ಒಂದು ಪುಟ್ಟ ಟೀಸರ್‌ ಬಿಡುಗಡೆ ಮಾಡಿ ನಿರೀಕ್ಷೆ ಹೆಚ್ಚು ಮಾಡಿದೆ. ಈಗ ಅಲ್ಲು ಅರ್ಜುನ್‌ Insta ವೀಡಿಯೋದಲ್ಲಿ ಸೀಕ್ವೆಲ್‌ ಸಿನಿಮಾದ ಶೂಟಿಂಗ್‌ ಗ್ಲಿಮ್ಸಸ್‌ ಕೊಟ್ಟಿದ್ದಾರೆ.

https://www.instagram.com/reel/CwjcwvwSlxO/?utm_source=ig_web_copy_link

ಅಲ್ಲು ಅರ್ಜುನ್ ‘ಪುಷ್ಪ 2’ ಮೇಕಿಂಗ್ ಜೊತೆಗೆ ತಮ್ಮ ದಿನಚರಿ ಹೇಗಿರುತ್ತದೆ ಎನ್ನುವುದನ್ನೂ 2 ನಿಮಿಷ 20 ಸೆಕೆಂಡ್‌ಗಳ ಈ ವಿಡಿಯೋ ತುಣುಕಿನಲ್ಲಿ ರಿವೀಲ್ ಮಾಡಿದ್ದಾರೆ. ಒಬ್ಬ ಸೆಲೆಬ್ರಿಟಿ ಲೈಫ್ ಸ್ಟೈಲ್ ಹೇಗಿರುತ್ತದೆ? ಅವರ ಮನೆ ಕಾರು, ಗಾರ್ಡನ್, ಕ್ಯಾರವಾನ್ ಬಗ್ಗೆ ಇಲ್ಲಿ ಮಾಹಿತಿ ಇದೆ. ಅಭಿಮಾನಿಗಳ ಕ್ಯೂರಿಯಾಸಿಟಿ ತಣಿಸುವ ಕೆಲಸ ಮಾಡಿದ್ದಾರೆ ಅಲ್ಲು ಅರ್ಜುನ್‌. ಈ ಸ್ಪೆಷಲ್ ವಿಡಿಯೋಗೆ ಇನ್‌ಸ್ಟಾಗ್ರಾಂ ಸಾಥ್ ಕೊಟ್ಟಿದೆ. ಅಲ್ಲು ಅರ್ಜುನ್‌ ಬೆಳಗ್ಗೆ ಎದ್ದಾಕ್ಷಣ ತಮ್ಮ ಮನೆಯ ‘ಅಲ್ಲು ಗಾರ್ಡನ್‌’ನಲ್ಲಿ ಧ್ಯಾನ ಮಾಡುತ್ತಾರೆ. ಗಾರ್ಡನ್‌ನಲ್ಲಿ ವಾಕ್‌ ಮಾಡಿದ ನಂತರ ಕಾಫಿ ಕುಡಿದು ತಮ್ಮ ದುಬಾರಿ ಕಾರು ಹತ್ತಿ ಹೊರಡುತ್ತಾರೆ. ಕಾರಿನಲ್ಲಿದ್ದಾಗಲೇ ಮುದ್ದಿನ ಮಕ್ಕಳಿಗೆ ವಿಡಿಯೋ ಕಾಲ್ ಮಾಡುತ್ತಾರೆ. ಮಾತನಾಡುತ್ತಾ ಹೈದರಾಬಾದ್‌ ರಾಮೋಜಿ ಸಿಟಿ ಫಿಲ್ಮ ಸಿಟಿ ತಲುಪುತ್ತಾರೆ.

ಸೆಟ್‌ ಪ್ರವೇಶಿಸುತ್ತಿದ್ದಂತೆ ಸಿನಿಮಾಗೆ ಸಂಬಂಧಿಸಿದ ಕಾಸ್ಟ್ಯೂಮ್, ಪ್ರಾಪರ್ಟಿಸ್ ಆಯ್ಕೆ ಮಾಡಿಕೊಂಡು ತಮ್ಮ ಕ್ಯಾರವಾನ್‌ ಪ್ರವೇಶಿಸುತ್ತಾರೆ. ಅಲ್ಲು ಕ್ಯಾರವಾನ್ ತಲುಪುತ್ತಿದ್ದಂತೆ ನಿರ್ದೇಶಕ ಸುಕುಮಾರ್ ನೆಚ್ಚಿನ ಡಾರ್ಲಿಂಗ್ ಮೀಟ್ ಮಾಡಿ ಹಗ್ ಮಾಡಿ ಆ ದಿನದ ಸೀನ್ಸ್ ಬಗ್ಗೆ ವಿವರಣೆ ನೀಡುತ್ತಾರೆ. ನಂತರ ಮೇಕಪ್ ಮಾಡಿಕೊಂಡು ಕ್ಯಾಮೆರಾ ಎದುರು ಬರುತ್ತಾರೆ. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಸುಕುಮಾರ್ ಸಿನಿಮಾ ಜರ್ನೀ ಶುರುವಾಗಿದ್ದು ಅಲ್ಲು ಜೊತೆನೇ. ‘ಆರ್ಯ’ ಸಿನಿಮಾದ ಮೂಲಕ ಹಿಟ್ ಜೋಡಿಯಾದ ಅಲ್ಲು – ಸುಕುಮಾರ್‌ ‘ಪುಷ್ಪ’ದಲ್ಲಿ ಮತ್ತೊಂದು ದೊಡ್ಡ ಯಶಸ್ಸು ಕಂಡರು. ಸದ್ಯ ‘ಪುಷ್ಪ 2’ಗೆ ರಾಮೋಜಿರಾವ್‌ ಫಿಲ್ಮ್‌ ಸಿಟಿಯಲ್ಲಿ ಶೂಟಿಂಗ್‌ ನಡೆಯುತ್ತಿದ್ದು, ಮುಂದನ ವರ್ಷ ಈ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here