ಅಟ್ಲೀ ನಿರ್ದೇಶನದ ಬಹುನಿರೀಕ್ಷಿತ ‘ಜವಾನ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಭರ್ಜರಿ ಆಕ್ಷನ್‌ ಇರುವ ಸೂಚನೆ ಸಿಕ್ಕಿದ್ದು ಹೀರೋ ಶಾರುಖ್‌ ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ, ಪ್ರಿಯಾಮಣಿ, ಸಂಜಯ್‌ ದತ್‌ ನಟನೆಯ ಸಿನಿಮಾ ಸೆಪ್ಟೆಂಬರ್‌ 7ರಂದು ತೆರೆಕಾಣಲಿದೆ.

ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಜವಾನ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಹೀರೋ ಶಾರುಖ್ ಒಂದು ಕಡೆ ಸೈನಿಕನಾಗಿ ಕಾಣಿಸಿಕೊಂಡರೆ ಇನ್ನೊಂದೆಡೆ ಸಾರ್ವಜನಿಕರ ಬೆಂಬಲಕ್ಕೆ ನಿಂತ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಪೊಲೀಸ್‌ ಅಧಿಕಾರಿಯಾಗಿ.. ಹೀಗೆ ವಿವಿಧ ರೂಪಗಳಲ್ಲಿದ್ದಾರೆ. ನಯನತಾರಾ ಗೂಂಡಾಗಳನ್ನು ಮಟ್ಟ ಹಾಕುವ ಪೊಲೀಸ್ ಅಧಿಕಾರಿಯಾಗಿದ್ದರೆ, ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪಾತ್ರವಿದೆ. ಟ್ರೈಲರ್‌ನಲ್ಲಿ ಪ್ರಿಯಾಮಣಿ ಕಾಣಿಸಿದರೂ, ಚಿತ್ರದಲ್ಲಿನ ಅವರ ಪಾತ್ರದ ಪರಿಚಯ ಸಿಗುವುದಿಲ್ಲ. ಟ್ರೈಲರ್‌ ನೋಡಿದಾಗ ಚಿತ್ರದಲ್ಲಿ ಶಾರುಖ್‌ರದ್ದು ದ್ವಿಪಾತ್ರವೇ, ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಎನ್ನುವ ಸಂಶಯ ಬರುತ್ತದೆ.

‘ಒಬ್ಬ ರಾಜನಿದ್ದ ಅವನು ಒಂದರ ಮೇಲೊಂದು ಯುದ್ದಗಳಲ್ಲಿ ಸೋಲುತ್ತಿದ್ದ’ ಎಂದು ಟ್ರೇಲರ್‌ ಆರಂಭವಾಗುತ್ತದೆ. ಪೊಲೀಸ್‌ ಇಲಾಖೆಗೆ ಸವಾಲೆಸೆಯುವ ಹೀರೋ ಶಾರುಖ್‌, ಜಗತ್ತಿನ ನಾಲ್ಕನೇ ಅತೀ ದೊಡ್ಡ ವೆಪನ್‌ ಡೀಲರ್‌ ಆಗಿ ವಿಲನ್‌ ವಿಜಯ್‌ ಮಾಸ್‌ ಲುಕ್‌ನಲ್ಲಿ ನಟಿಸಿದ್ದಾರೆ. ‘ನೀನು ಮಗನನ್ನು ಮುಟ್ಟುವ ಮೊದಲು ಅವನ ತಂದೆ ಜೊತೆ ಮಾತನಾಡು’ ಎನ್ನುವ ಡೈಲಾಗ್‌ ಇಂಪ್ರೆಸೀವ್‌ ಆಗಿದೆ. ನಟಿ ಅಲಿಯಾ ಭಟ್‌ ಹೆಸರು ಸಹ ಟ್ರೇಲರ್‌ನಲ್ಲಿ ಕೇಳಿಸುತ್ತದೆ! Red Chillies Entertainment ಬ್ಯಾನರ್ ಅಡಿ ಗೌರಿ ಖಾನ್ ನಿ‌ರ್ಮಿಸುತ್ತಿರುವ ಚಿತ್ರಕ್ಕೆ ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜನೆಯಿದೆ. ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್‌ 7ರಂದು ಸಿನಿಮಾ ತೆರೆಕಾಣಲಿದೆ.

Previous articleInsta ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್‌ | ನಟನ ಮನೆ, ದಿನಚರಿ ವೀಡಿಯೋ ಬಿಡುಗಡೆ
Next articleಮನು – ಪ್ರಿಯಾ ಪ್ರೀತಿಯ ಕತೆ ಹೇಳುವ ಫೀಲ್‌ ಗುಡ್‌ ಸಿನಿಮಾ

LEAVE A REPLY

Connect with

Please enter your comment!
Please enter your name here