‘ಓಂ ಶಿವಂ’ ಸಿನಿಮಾ ಮೂಲಕ ಭಾರ್ಗವ ಕೃಷ್ಣ ಹೀರೋ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿರಾನಿಕ ಶೆಟ್ಟಿ ಚಿತ್ರದ ನಾಯಕಿ. ಆಲ್ವಿನ್‌ ನಿರ್ದೇಶನದ ಈ ಲವ್‌ – ಡ್ರಾಮಾ ಜಾನರ್‌ ಸಿನಿಮಾ ಮುಂದಿನ ತಿಂಗಳು ಆಗಸ್ಟ್‌ನಲ್ಲಿ ತೆರೆಗೆ ಬರುತ್ತಿದೆ.

ಆಲ್ವಿನ್‌ ನಿರ್ದೇಶನದ ‘ಓಂ ಶಿವಂ’ ಸಿನಿಮಾದ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಈ ಹಿಂದೆ ‘ರಾಜ್‌ ಬಹದ್ದೂರ್‌’ ಸಿನಿಮಾ ನಿರ್ದೇಶಿಸಿದ್ದ ಅವರಿಗೆ ಇದು ಎರಡನೇ ನಿರ್ದೇಶನದ ಸಿನಿಮಾ. ತಮ್ಮ ಸಿನಿಮಾ ಕುರಿತು ಮಾತನಾಡುವ ಆಲ್ವಿನ್‌, ‘ಇದು ಲವ್ ಜಾನರ್ ಚಿತ್ರ. ಆದರೆ ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳೂ ಇವೆ. ನಮ್ಮ ಚಿತ್ರಕ್ಕೆ ಇಪ್ಪತ್ತೊಂದು ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಭಾರ್ಗವ್‌ ಅವರ ತಂದೆ ಕೆ ಎನ್‌ ಕೃಷ್ಣ ಅವರು ಸಿನಿಮಾದ ನಿರ್ಮಾಪಕ.

‘ಆಲ್ವಿನ್ ಅವರು ಒಳ್ಳೆಯ ಕಥೆ ಸಿದ್ಧ ಮಾಡಿಕೊಂಡು ಬಂದು ಕಥೆ ಹೇಳಿದರು. ಕಥೆ ಚೆನ್ನಾಗಿದೆ, ನಾಯಕನನ್ನು ಹುಡುಕಿ. ಚಿತ್ರ ಆರಂಭಿಸೋಣ ಎಂದೆ. ಅದಕ್ಕೆ ಆಲ್ವಿನ್, ನಿಮ್ಮ ಮಗ ಭಾರ್ಗವ್, ಕತೆಗೆ ಸರಿ ಹೊಂದುತ್ತಾರೆ. ಅವರೇ ನಮ್ಮ ಚಿತ್ರದ ನಾಯಕ ಎಂದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ’ ಎನ್ನುವುದು ನಿರ್ಮಾಪಕ ಕೃಷ್ಣ ಅವರ ಮಾತು. ಮುಂದಿನ ತಿಂಗಳು, ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ ತರುವುದು ಅವರ ಯೋಜನೆ. ನಾಯಕ ಭಾರ್ಗವ್‌ ಕ್ಯಾಮೆರಾ ಎದುರು ಬರುವ ಮುನ್ನ ಸಾಕಷ್ಟು ತಯಾರಿ ನಡೆಸಿಕೊಂಡೇ ಬಂದಿರುವುದಾಗಿ ಹೇಳುತ್ತಾರೆ. ವಿರಾನಿಕ ಶೆಟ್ಟಿ ಚಿತ್ರದ ನಾಯಕಿ. ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ವರ್ಧನ್, ಅಪೂರ್ವ, ಲಕ್ಷ್ಮೀ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ಯಾರ್ಡ್ಲೆ ಸಂಗೀತ, ವೀರೇಶ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here