ಅನೂಪ್‌ ಆಂಟೋನಿ ನಿರ್ದೇಶನದಲ್ಲಿ ಕೋಮಲ್‌ ಕುಮಾರ್‌ ನಟಿಸುತ್ತಿರುವ ‘ಕುಟೀರ’ ಸಿನಿಮಾ ಸೆಟ್ಟೇರಿದೆ. ಕೋಮಲ್‌ ಅವರು ಹೀರೋ ಆಗಿ ನಟಿಸುತ್ತಿರುವ 25ನೇ ಚಿತ್ರವಿದು. ಹಾರರ್‌ – ಕಾಮಿಡಿ ಜಾನರ್‌ ಸಿನಿಮಾದ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್‌ ಇರಲಿದ್ದಾರೆ.

ಕೋಮಲ್ ಕುಮಾರ್ ಹೀರೋ ಆಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ‘ಕುಟೀರ’ ಶೀರ್ಷಿಕೆ ನಿಗಧಿಯಾಗಿದೆ. ಚಿತ್ರವನ್ನು ಅನೂಪ್ ಅಂಟೋನಿ ನಿರ್ದೇಶಿಸುತ್ತಿದ್ದಾರೆ. ಇದು ಕೋಮಲ್‌ ಅವರ 25ನೇ ಸಿನಿಮಾ. ‘ನಾನು ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25ನೇ ಚಿತ್ರವಿದು. ನಾನು ಬಹಳ ಇಷ್ಟಪಡುವ ಹಾರರ್ – ಕಾಮಿಡಿ ಫ್ಯಾಂಟಸಿ ಜಾನರ್ ಚಿತ್ರ. ಶೀರ್ಷಿಕೆಯೇ ಹೇಳುವಂತೆ ‘ಕುಟೀರ’ ಎಂದರೆ ಮನೆ. ಈ ಚಿತ್ರದಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳಿಂದ ಯಾವ ರೀತಿ ಸಂಕಷ್ಟಗಳು ಎದುರಾಗಲಿವೆ ಎನ್ನುವುದು ಚಿತ್ರದ ಕಥಾವಸ್ತು’ ಎನ್ನುತ್ತಾರೆ ಕೋಮಲ್‌.

ನಿರ್ದೇಶಕ ಅನೂಪ್‌ ಆಂಟೋನಿ ಅವಕಾಶ ನೀಡಿದ ನಿರ್ಮಾಪಕರನ್ನು ಸ್ಮರಿಸುತ್ತಾರೆ. ಕತೆ ಬರೆಯುವಾಗಲೇ ಚಿತ್ರದ ನಾಯಕನಟನಾಗಿ ಕೋಮಲ್‌ ಅವರು ಇರಬೇಕೆಂದು ಅವರು ಅಂದುಕೊಂಡಿದ್ದರಂತೆ. ಕೋಮಲ್‌ ಕತೆ ಕೇಳಿದಾಕ್ಷಣ ಓಕೆ ಎಂದಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ‘ಗಣಪ’ ಚಿತ್ರದ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಈ ಸಿನಿಮಾದ ನಾಯಕಿ. ಚಿತ್ರದಲ್ಲಿ ಅವರದ್ದು ಆಂಗ್ಲೋ – ಇಂಡಿಯನ್‌ ಪಾತ್ರ. ಯಶ್ ಶೆಟ್ಟಿ, ಕಾಕ್ರೋಜ್ ಸುಧಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಿ ಜಿ ಭರತ್ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನ, ಶಂಕರ್ ರಾಮನ್ ಸಂಭಾಷಣೆ ಚಿತ್ರಕ್ಕಿದೆ. Kamsale Films ಬ್ಯಾನರ್‌ ಅಡಿಯಲ್ಲಿ ಮಧು ಮರಿಸ್ವಾಮಿ ಸಿನಿಮಾ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here