ಪುನೀತ್‌ ಅರಸೀಕೆರೆ ನಿರ್ದೇಶನದ ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾ ಸೆಟ್ಟೇರಿದೆ. ಧರ್ಮ ಕೀರ್ತಿರಾಜ್‌ ಚಿತ್ರದಲ್ಲಿ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ರೈತರ ಸಮಸ್ಯೆಗಳನ್ನು ಹೇಳುತ್ತಲೇ ಸಸ್ಪೆನ್ಸ್‌ – ಥ್ರಿಲ್ಲರ್‌ ಕತೆಯೊಂದನ್ನು ನಿರೂಪಿಸುತ್ತಿರುವುದಾಗಿ ನಿರ್ದೇಶಕರು ಹೇಳುತ್ತಾರೆ.

ಧರ್ಮ ಕೀರ್ತಿರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಲನಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ‌ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಪುನೀತ್ ಅರಸೀಕೆರೆ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾಹಂದರವಿದು. ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ದಲ್ಲಾಳಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಊರಗೌಡ ಪರಿಹಾರ ಹುಡುಕುತ್ತಾನೆ. ಆತ ಇದ್ದಕ್ಕಿದ್ದ ಹಾಗೆ ಕಾಣೆಯಾದಾಗ ಆತನನ್ನು ಪತ್ತೆಹಚ್ಚಲು ಬಂದ ಪೋಲೀಸ್ ಅಧಿಕಾರಿ ಕೂಡ ಕಣ್ಮರೆಯಾಗುತ್ತಾನೆ. ಇದಕ್ಕೆಲ್ಲ ಪರಿಹಾರ ಕಂಡುಹಿಡಿಯುವುದೇ ಸ್ನೇಹಿತನನ್ನು ಹುಡುಕಿಕೊಂಡು ಹಳ್ಳಿಗೆ ಬರುವ ನಾಯಕ ಹೇಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬುದು ಚಿತ್ರದ ಕಥಾವಸ್ತು.

‘ಡಬಲ್ ಬೋರ್ಡ್’ ಚಿತ್ರವನ್ನು ನಿರ್ದೇಶಿಸಿದ್ದ ಪುನೀತ್ ಅರಸೀಕೆರೆ ಅವರ ಎರಡನೇ ಚಿತ್ರವಿದು. ‘ಅಕ್ಟೋಬರ್ 6ರಿಂದ ಆರಂಭಿಸಿ ಅರಸೀಕೆರೆಯ ಪೋಲಿಸ್ ಸ್ಟೇಷನ್, ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಹಂತರ ಶೂಟಿಂಗ್ ಮುಗಿಸಿ, ನಂತರ ಬೆಂಗಳೂರಿನಲ್ಲಿ ಅಮರಾವತಿ ಪೋಲಿಸ್ ಸ್ಟೇಷನ್ ಚಿತ್ರದ ಚಿತ್ರೀಕರಣ ಮುಂದುವರೆಸಲಾಗುವುದು. ಒಟ್ಟು 45ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದಿದ್ದಾರೆ ನಿರ್ದೇಶಕ‌ ಪುನೀತ್. S A R Productions ಬ್ಯಾನರ್‌ ಅಡಿಯಲ್ಲಿ ಅಂಜನರೆಡ್ಡಿ, ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ವೇದ್ವಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಭವ್ಯ, ಉಮಾಶ್ರೀ, ಸಾಧುಕೋಕಿಲ, ಚಿಕ್ಕಣ್ಣ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ. ಬಕ್ಕೇಶ್ ಸಂಗೀತ, ವಿ ರಮೇಶ್ ಬಾಬು ಛಾಯಾಗ್ರಹಣ, ಥ್ರಿಲ್ಲರ್ ಮಂಜು, ವಿಕ್ರಂ ಮೋರ್ ಸಾಹಸ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ, ಮಾಸ್ತಿ ಸಂಭಾಷಣೆ ಚಿತ್ರಕ್ಕಿರಲಿದೆ.

LEAVE A REPLY

Connect with

Please enter your comment!
Please enter your name here