‘ಅನಾವರಣ’ ಸಿನಿಮಾದ ‘ರೀ ದೇವರೇ’ ಹಾಡು ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಮೆಲೋಡಿ ಹಾಡಿನ ಸಾಹಿತ್ಯ ವಿ ನಾಗೇಂದ್ರ ಪ್ರಸಾದ್ ಅವರದ್ದು. ಹರೀಶ್ ಕುಮಾರ್ ಬಿ ಕೆ ಮತ್ತು ಮೇಘನಾ ಕುಲಕರ್ಣಿ ಜೋಶಿ ದನಿಯಾಗಿರುವ ಹಾಡು ಅರ್ಜುನ್ ಯೋಗಿ ಮತ್ತು ಸಾರಿಕಾ ರಾವ್ ಅವರ ಮೇಲೆ ಪಿಕ್ಚರೈಸ್‌ ಆಗಿದೆ.

ಅರ್ಜುನ್‌ ಯೋಗಿ ಮತ್ತು ಸಾರಿಕಾ ರಾವ್‌ ನಟಿಸಿರುವ ‘ಅನಾವರಣ’ ಸಿನಿಮಾದ ‘ರೀ ದೇವರೇ’ ಹಾಡು ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಮೆಲೋಡಿ ಹಾಡಿನ ಸಾಹಿತ್ಯ ವಿ ನಾಗೇಂದ್ರ ಪ್ರಸಾದ್ ಅವರದ್ದು. ಹರೀಶ್ ಕುಮಾರ್ ಬಿ ಕೆ ಮತ್ತು ಮೇಘನಾ ಕುಲಕರ್ಣಿ ಜೋಶಿ ದನಿಯಾಗಿರುವ ಹಾಡು ಅರ್ಜುನ್ ಯೋಗಿ ಮತ್ತು ಸಾರಿಕಾ ರಾವ್ ಅವರ ಮೇಲೆ ಪಿಕ್ಚರೈಸ್‌ ಆಗಿದೆ. ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಹೆಸರು ಮಾಡಿದ್ದಾರೆ.

ನಮ್ಮ ಸಿನಿಮಾ ಬ್ಯಾನರ್‌ನಡಿ ಅದ್ವೈತ್ ಪ್ರಭಾಕರ್, ಆರ್ ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ ಹೆಚ್ ನಿರ್ಮಿಸಿರುವ ಸಿನಿಮಾ ಇದು. ಈ ಹಿಂದೆ ಬಿಡುಗಡೆಯಾಗಿದ್ದ ಏನಾಗಿದೆ ಎಂಬ ಪ್ರೇಮಗೀತೆಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಿನಿಮಾದ ರೀ ದೇವರೇ ಹಾಡು ರಿಲೀಸ್‌ ಆಗಿದೆ. ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲದ್ದಾರೆ. 40ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ಮಿಸಿರುವ ಹರೀಶ್ ಕುಮಾರ್ ಮತ್ತು ಮಂಜುನಾಥ್ ಪಿಳ್ಳಪ್ಪ ನಿರ್ದೇಶನದ ಚೊಚ್ಚಲ ಚಿತ್ರವಿದು. ವೆಂಕಿ UDV ಸಂಕಲನ, ಡಾ ವಿ ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಬಿ ಆರ್ ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಡಿಸೆಂಬರ್ 1ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here