‘ಮಮ್ಮಿ’, ‘ದೇವಕಿ’ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ‘ಸೈತಾನ್’ ಚಿತ್ರದೊಂದಿಗೆ ನಿರ್ಮಾಪಕರಾಗುತ್ತಿದ್ದಾರೆ. ಅವರ ಶಿಷ್ಯ ಪ್ರಭಾಕರ್‌ ನಿರ್ದೇಶನದ ಚಿತ್ರದ ನಾಯಕಿಯಾಗಿ ಅನುಶ್ರೀ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

“ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರೇ ನನಗೆ ಲೋಹಿತ್ ಅವರ ಪರಿಚಯ‌ ಮಾಡಿಸಿದ್ದು. ಈ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಅಂದೆ. ಕಿರುತೆರೆಯಲ್ಲಿ ಆರಾಮವಾಗಿದ್ದೀನಿ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಅಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. ಇದರಲ್ಲಿ ಹೀರೋ, ಹೀರೋಯಿನ್‌ ಅಂತ ಏನಿಲ್ಲ. ಕತೆಯೇ ನಿಜವಾದ ಹೀರೋ” ಎಂದರು ಅನುಶ್ರೀ. ‘ಉಪ್ಪು ಹುಳಿ ಖಾರ’ ಚಿತ್ರದ ನಂತರ ಅವರು ‘ಸೈತಾನ್‌’ ಹಾರರ್‌ – ಥ್ರಿಲ್ಲರ್‌ ಚಿತ್ರದೊಂದಿಗೆ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ಧಾರೆ. ಈಗಾಗಲೇ ಈ ಚಿತ್ರದ ಮೊದಲ ಹಂತರ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.

‘ಮಮ್ಮಿ’, ‘ದೇವಕಿ’ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ‘ಸೈತಾನ್’ ಚಿತ್ರದೊಂದಿಗೆ ನಿರ್ಮಾಪಕರಾಗುತ್ತಿದ್ದಾರೆ. ಚಿತ್ರದ ನಿರ್ಮಾಣದಲ್ಲಿ ಪಾರ್ಥಿವನ್‌ ಅವರಿಗೆ ಜೊತೆಯಾಗಿದ್ದು, ಲೋಹಿತ್‌ ಅವರ ಶಿಷ್ಯ ಪ್ರಭಾಕರ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ನಟಿಯರಾದ ಅದಿತಿ ಪ್ರಭುದೇವ, ಭಾವನಾರಾವ್, ಸಂಭಾಷಣೆಕಾರ ಮಾಸ್ತಿ ಹಾಜರಿದ್ದು ಸಿನಿಮಾಗೆ ಶುಭ ಹಾರೈಸಿದರು. “ನಾನು ನಿರೂಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದು. ಅನುಶ್ರೀ ಕೂಡ ನಿರೂಪಕಿಯಾಗಿ ಹೆಸರು ಮಾಡಿರುವವರು. ಲೋಹಿತ್ ಅವರ ‘ಮಮ್ಮಿ’ ಚಿತ್ರ ನೋಡಿದ್ದೇನೆ. ಚಿಕ್ಕ ವಯಸ್ಸಿಗೆ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ ಕೂಡ ಕುತೂಹಲ ಹುಟ್ಟಿಸಿದೆ. ಚಿತ್ರತಂಡಕ್ಕೆ ಒಳಿತಾಗಲಿ” ಎಂದು ನಟಿ ಅದಿತಿ ಹಾರೈಸಿದರು. ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಸಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ತಾರಾಗಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here