Rapper ರಾಫ್ತಾರ್‌ ನಟನೆಯ ‘ಬಜಾವೋ’ ಮ್ಯೂಸಿಕಲ್‌ – ಕಾಮಿಡಿ ಹಿಂದಿ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ತನುಜ್‌ ವಿರ್ವಾನಿ, ಸಾಹಿಲ್‌ ವೈದ್‌, ಸಾಹಿಲ್‌ ಖಟ್ಟರ್‌ ಪ್ರಮುಖ ಪಾತ್ರಗಳಲ್ಲಿರುವ ಸರಣಿ ಆಗಸ್ಟ್‌ 25ರಿಂದ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ.

Rapper ರಾಫ್ತಾರ್‌ ನಟನೆಯ ‘ಬಜಾವೋ’ ಮ್ಯೂಸಿಕಲ್‌ – ಕಾಮಿಡಿ ಹಿಂದಿ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ತನುಜ್‌ ವಿರ್ವಾನಿ, ಸಾಹಿಲ್‌ ವೈದ್‌, ಸಾಹಿಲ್‌ ಖಟ್ಟರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶಿವ ವರ್ಮ ಮತ್ತು ಸಪ್ತರಾಜ್ ಚಕ್ರವರ್ತಿ ಸರಣಿ ನಿರ್ದೇಶಿಸಿದ್ದಾರೆ. ಟ್ರೈಲರ್ ಇಬ್ಬರು ಗಾಯಕರು ಮತ್ತು Rapperಗಳ ನಡುವಿನ ವೈಯಕ್ತಿಕ ದ್ವೇಷವನ್ನು ಪ್ರದರ್ಶಿಸುವ ಮೂಲಕ ಪ್ರಾರಂಭವಾಗುತ್ತದೆ. ಅವರು ವಿವಿಧ ಘಟನೆಗಳಲ್ಲಿ ಪರಸ್ಪರ ಪೈಪೋಟಿ ನಡೆಸುವ ಸಂದರ್ಭ ಮರುಕಳಿಸುತ್ತಲೇ ಇರುತ್ತದೆ. ರಾಫ್ತಾರ್ ಈ ಇಬ್ಬರಲ್ಲಿ ಒಬ್ಬನಾಗಿರುತ್ತಾನೆ. ಇವನು ಮೂರು ಅಪರಿಚಿತ ವ್ಯಕ್ತಿಗಳಿಗೆ ಸಂಗೀತ ಕಲಿಯಲು ಹಾಗೂ ತನ್ನೊಂದಿಗೆ ಕೆಲಸ ಮಾಡಲು ಅವಕಾಶ ನೀಡುತ್ತಾನೆ. ತನುಜ್, ಸಾಹಿಲ್ ಮತ್ತು ಖಟ್ಟರ್ ಈ ಮೂವರು ಸ್ನೇಹಿತರನ್ನು ಗ್ಯಾಂಗ್‌ಸ್ಟರ್‌ ಗುಂಪೊಂದು ಟ್ರ್ಯಾಪ್‌ ಮಾಡುತ್ತದೆ. ಇವರು 2 ಕೋಟಿ ಹಣದ ಆಮಿಷಕ್ಕೆ ಬಲಿಯಾಗಿ ಸಿಕ್ಕಿಬೀಳುತ್ತಾರೆ. ನಂತರ ಈ ವಿಷಯ ದೊಡ್ಡದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುವುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. Rapper ರಾಫ್ತಾರ್ ಈ ಸರಣಿಯ ಮೂಲಕ ನಟನಾಗಿ ಪರಿಚಯವಾಗುತ್ತಿದ್ದಾರೆ. ಜ್ಯೋತಿ ದೇಶಪಾಂಡೆ, ಪ್ರಜ್ಞಾ ಸಿಂಗ್ ಮತ್ತು ವಿಜೇಂದ್ರ ಸಹಾನಿ ನಿರ್ಮಾಣದ ಸರಣಿ ಆಗಸ್ಟ್‌ 25ರಿಂದ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here