ವರುಣ್‌ ತೇಜ್‌ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್‌ ನಟನೆಯ ನೂತನ ತೆಲುಗು – ಹಿಂದಿ ದ್ವಿಭಾಷಾ ಸಿನಿಮಾದ ಶೀರ್ಷಿಕೆ ‘ಆಪರೇಷನ್‌ ವ್ಯಾಲೆಂಟೇನ್‌’ ಎಂದಾಗಿದೆ. ಶಕ್ತಿ ಪ್ರತಾಪ್‌ ಸಿಂಗ್‌ ಹಡಾ ನಿರ್ದೇಶನದ ಆಕ್ಷನ್‌ – ಎಂಟರ್‌ಟೇನರ್‌ ಚಿತ್ರವಿದು.

ಶಕ್ತಿ ಪ್ರತಾಪ್‌ ಸಿಂಗ್‌ ಹಡಾ ನಿರ್ದೇಶನದ ನೂತನ ತೆಲುಗು ಚಿತ್ರಕ್ಕೆ ‘ಆಪರೇಷನ್‌ ವ್ಯಾಲೆಂಟೇನ್‌’ ಎಂದು ನಾಮಕರಣವಾಗಿದೆ. ವರುಣ್‌ ತೇಜ್‌ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರ ವಿಮರ್ಶಕ, ಬಾಲಿವುಡ್‌ ಟ್ರೇಡ್‌ ಅನಲಿಸ್ಟ್‌ ತರುಣ್‌ ಆದರ್ಶ್‌ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಹಂಚಿಕೊಂಡು, ‘ಆಪರೇಷನ್ ವ್ಯಾಲೆಂಟೇನ್ ಚಿತ್ರವು ಭಾರತೀಯ ವಾಯುಪಡೆಯನ್ನು ಆಧರಿಸಿದ ವೈಮಾನಿಕ ಸಾಹಸ ಚಿತ್ರವಾಗಿದೆ’ ಎಂದಿದ್ದಾರೆ. ಈ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. 2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ವರುಣ್ ತೇಜ್ ಈ ಹಿಂದೆ ‘F3: ಫನ್ ಅಂಡ್ ಫ್ರಸ್ಟ್ರೇಶನ್’ ಚಿತ್ರದಲ್ಲಿ ವೆಂಕಟೇಶ್, ತಮನ್ನಾ ಭಾಟಿಯಾ ಮತ್ತು ಮೆಹ್ರೀನ್ ಪಿರ್ಜಾದಾರ ಜೊತೆಗೆ ನಟಿಸಿದ್ದರು. ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು.

2017ರಲ್ಲಿ ಸಾಯಿ ಪಲ್ಲವಿ ಜೊತೆ ನಟಿಸಿದ್ದ ‘ಫಿದಾ’ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು ವರುಣ್‌ ತೇಜ್‌. ‘ತೊಲಿ ಪ್ರೇಮ’, ‘ಗದ್ದಲಕೊಂಡ ಗಣೇಶ್’, ‘ಎಫ್ 2’ ಮತ್ತು ‘ಎಫ್ 3’ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ‘ಆಪರೇಷನ್ ವ್ಯಾಲೆಂಟೇನ್’ ಜೊತೆಗೆ ‘ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ಮತ್ತು ‘ಮಟ್ಕಾ’ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮಾನುಷಿ ಚಿಲ್ಲರ್ 2022ರಲ್ಲಿ ಅಕ್ಷಯ್ ಕುಮಾರ್ ಜೊತೆಗೆ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ಸೋನು ಸೂದ್, ನಿಖಿತಾ ಚಡ್ಡಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಚೌಹಾಣ್ ಅವರ ಜೀವನ ಆಧರಿಸಿದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತು. ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್‌ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸಂದೀಪ್ ಮುದ್ದಾ ನಿರ್ಮಿಸುತ್ತಿದ್ದಾರೆ. ಗಾಡ್ ಬ್ಲೆಸ್ ಎಂಟರ್‌ಟೇನ್‌ಮೆಂಟ್‌ನೊಂದಿಗೆ ನಂದಕುಮಾರ್ ಅಬ್ಬಿನೇನಿ ಸಹನಿರ್ಮಾಣ ಮಾಡುತ್ತಿದ್ದಾರೆ.

Previous article‘ಬಜಾವೋ’ ಟ್ರೈಲರ್‌ | Rapper ರಾಫ್ತಾರ್‌ ಹಿಂದಿ ಸರಣಿ JioCinemaದಲ್ಲಿ
Next articleಕೌಟುಂಬಿಕ ಹಿಂಸೆ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸರಣಿ

LEAVE A REPLY

Connect with

Please enter your comment!
Please enter your name here