ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾತಂಡದಿಂದ ಮತ್ತೊಂದು ಅಪ್‌ಡೇಟ್ಸ್‌ ಸಿಕ್ಕಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಜೋಡಿಯಾಗಿ ನಟಿ ಭಾವನಾ ಅವರು ‘ವೀರವ್ವ’ ಪಾತ್ರದಲ್ಲಿ ನಟಿಸಲಿದ್ದಾರೆ. KRG Studios ನಿರ್ಮಾಣದ ಈ ಸಿನಿಮಾದ ನಾಯಕನಾಗಿ ಧನಂಜಯ ನಟಿಸುತ್ತಿದ್ದಾರೆ.

ಬಹುಭಾಷಾ‌ ತಾರೆ ಭಾವನಾ ಮೆನನ್ ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಅವರು ಶಿವರಾಜಕುಮಾರ್‌ ಜೋಡಿಯಾಗಿ ‘ವೀರವ್ವ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ನಿರ್ಮಿಸುತ್ತಿರುವ KRG Studios ಭಾವನಾ ಪಾತ್ರದ ವಿಶೇಷ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಉತ್ತರ ಕರ್ನಾಟಕ ಹೆಣ್ಣುಮಗಳಾಗಿ ಇಳಕಲ್‌ ಸೀರೆಯುಟ್ಟು, ಸೆರಗು ಹೊದ್ದು ವಿಶೇಷವಾಗಿ ಕಾಣಿಸುತ್ತಿದ್ದಾರೆ ಭಾವನಾ. ಈ ಹಿಂದೆ ಶಿವರಾಜಕುಮಾರ್‌ ನಟನೆಯ ‘ಟಗರು’, ‘ಭಜರಂಗಿ 2’ ಚಿತ್ರಗಳಲ್ಲಿ ಭಾವನಾ ನಟಿಸಿದ್ದರು. ಡಾಲಿ‌ ಧನಂಜಯ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಐಶ್ವರ್ಯ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರಾ ಆಚಾರ್, ವಿಜಯ್ ಬಾಬು, ಯೋಗರಾಜ್‌ ಭಟ್‌ ನಟಿಸುತ್ತಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಾಹಣ, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ, ಅನಿಲ್ ಅನಿರುದ್ಧ್ ಸಂಕಲನ ಚಿತ್ರಕ್ಕಿದೆ. ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ ಆರ್ ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here