Bigg Boss OTT ಸೀಸನ್‌ 3 ಹಿಂದಿ ವರ್ಷನ್‌ ಜೂನ್‌ 21ರಿಂದ JioCinema Appನಲ್ಲಿ ಸ್ಟ್ರೀಮ್‌ ಆಗಲಿದೆ. ಬಾಲಿವುಡ್‌ ನಟ ಅನಿಲ್‌ ಕಪೂರ್‌ ಶೋ ನಿರೂಪಿಸಲಿದ್ದಾರೆ. ಅನಿಲ್‌ ಕಪೂರ್‌ ಪೋಸ್ಟರ್‌ ಮತ್ತು ಪ್ರೋಮೋದೊಂದಿಗೆ ಶೋ ಕುರಿತ ಘೋಷಣೆ ಹೊರಬಿದ್ದಿದೆ.

ಬಿಗ್‌ಬಾಸ್‌ OTT 3ನೇ ಸೀಸನ್‌ ಹಿಂದಿ ಅವತರಣಿಕೆ ಘೋಷಣೆಯಾಗಿದೆ. ಅನಿಲ್‌ ಕಪೂರ್‌ ನಿರೂಪಣೆಯಲ್ಲಿ ಜೂನ್‌ 21ರಿಂದ ಶೋ JioCinema Appನಲ್ಲಿ ಸ್ಟ್ರೀಮ್‌ ಆಗಲಿದೆ. ಅನಿಲ್‌ ಕಪೂರ್‌ ಪೋಸ್ಟರ್‌ ಮತ್ತು ಪ್ರೊಮೋದೊಂದಿಗೆ ಈ ಘೋಷಣೆ ಹೊರಬಿದ್ದಿದೆ. “Presenting ‘Anil Kapoor’ as the new host for Bigg Boss OTT 3!!! From reigning on the big screen to now ruling the Bigg Boss house, Anil Kapoor is kuch extra khaas! Witness his magic in #BiggBossOTT3 starting 21 June, exclusively on JioCinema Premium.” ಎನ್ನುವ ಒಕ್ಕಣಿಯೊಂದಿಗೆ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

Bigg Boss ಶೋ ಜೊತೆಗಿನ ಅಸೋಷಿಯೇಷನ್‌ ಕುರಿತು ಮಾತನಾಡಿರುವ ಅನಿಲ್‌ ಕಪೂರ್‌, ‘ಬಿಗ್‌ಬಾಸ್‌ ಶೋನಂತೆ ನಾನು ಕೂಡ ಚಿರ ಯೌವ್ವನಿಗ! ಕಾಲ ಕಳೆದಂತೆ ನನ್ನ ವಯಸ್ಸು ಚಿಕ್ಕದಾಗುತ್ತಿದೆ ಎಂದು ಜನರು ಹೇಳುತ್ತಿರುತ್ತಾರೆ. ಆದರೆ ಬಿಗ್‌ಬಾಸ್‌ timeless ಶೋ. ಅಲ್ಲಿ ನಿರೂಪಣೆ ಮಾಡುವುದೆಂದರೆ ವಾಪಸು ಶಾಲೆ, ಕಾಲೇಜಿಗೆ ಹೋದ ಹಾಗೆ! ಎಂದಿನಂತೆ ಪ್ರೀತಿ ಮತ್ತು ಪ್ಯಾಷನ್‌ನೊಂದಿಗೆ ನಿರೂಪಣೆಯ ಕರ್ತವ್ಯ ನಿರ್ವಹಿಸುತ್ತೇನೆ. unscripted ಶೋನಲ್ಲಿ ನಗು, ಅಳು, ಖುಷಿ, ಡ್ರಾಮಾ… ಎಲ್ಲವೂ ಇರಲಿದೆ’ ಎಂದಿದ್ದಾರೆ. ಶೆಜಾನ್‌ ಖಾನ್‌, ಶೆಹ್‌ಝಾದಾ ಧಮಿ, ಪ್ರತೀಕ್ಷಾ ಹೊನ್ಮುಖೆ, ವಿಕ್ಕಿ ಜೈನ್‌, ಪರಸ ಕಲ್ನಾವತ್‌, ತುಗೇಶ್‌, ಡಾಲಿ ಚಾಯ್‌ವಾಲಾ, ವೇದಾ ಪಾವ್‌ ದೀದಿ… Bigg Boss ಶೋನಲ್ಲಿ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here