ರಣದೀಪ್‌ ಝಾ ನಿರ್ದೇಶನದ ‘ಕೊಹ್ರಾ’ ಹಿಂದಿ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಬರುಣ್‌ ಸೋಬ್ತಿ ನಟಿಸಿರುವ ಕ್ರೈಂ – ಥ್ರಿಲ್ಲರ್‌ ಸರಣಿ ಜುಲೈ 15ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ಬರುಣ್ ಸೋಬ್ತಿ ಅಭಿನಯದ ‘ಕೊಹ್ರಾ’ (Kohrra) ಹಿಂದಿ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ‘ಅಸುರ್-2ʼ ಸರಣಿ ಯಶಸ್ಸಿನ ನಂತರ ಬರುನ್ ಸೋಬ್ತಿ ಮತ್ತೊಂದು ಅಪರಾಧ ಸರಣಿಯೊಂದಿಗೆ ಮರಳಿದ್ದಾರೆ. Netflix ತನ್ನ ಮುಂಬರುವ ಅಪರಾಧ ಸರಣಿಯಾದ ‘ಕೊಹ್ರಾ’ ಟ್ರೈಲರ್ ಅನಾವರಣಗೊಳಿಸಿದೆ. ಟ್ರೈಲರ್, ಪಂಜಾಬ್‌ನ ಜಾಗ್ರಾನಾದಲ್ಲಿನ ಹೊಲಗಳಲ್ಲಿ ಒಬ್ಬ ಯುವಕ ಮತ್ತು ಯುವತಿಯ ಮೃತದೇಹಗಳನ್ನು ಹುಡುಕುವುದರೊಂದಿಗೆ ಪ್ರಾರಂಭವಾಗುತ್ತದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಮೃತರನ್ನು NRI (Non Resident Indian) ಎಂದು ಗುರುತಿಸಲಾಗುತ್ತದೆ. ಕೊಲೆಯ ಸುತ್ತ ನಡೆದ ಸಂಪೂರ್ಣ ತನಿಖೆಯನ್ನು ಸರಣಿ ಒಳಗೊಂಡಿದೆ. ಸಸ್ಪೆನ್ಸ್‌ – ಥ್ರಿಲ್ಲರ್‌ ಹೊಸ ಸರಣಿಯು ಕೊಲೆಗಾರನನ್ನು ಬೇಟೆಯಾಡುವ ಘಟನೆಗಳ ಕಥಾಹಂದರ. ಸುದೀಪ್ ಶರ್ಮಾ ಈ ಸರಣಿಗೆ ಕತೆ ಬರೆದಿದ್ದು, ಗುಂಜಿತ್ ಚೋಪ್ರಾ ಮತ್ತು ಡಿಗ್ಗಿ ಸಿಸೋಡಿಯಾ ರಚಿಸಿದ್ದಾರೆ. ರಣದೀಪ್‌ ಝಾ ಸರಣಿ ನಿರ್ದೇಶಕರು. ಸುವೀಂದರ್ ಸಿಂಗ್, ಹರ್ಲೀನ್ ಸೇಥಿ, ಮನೀಶ್ ಚೌಧರಿ, ವರುಣ್ ಬಡೋಲಾ ಮತ್ತು ರಾಚೆಲ್ ಶೆಲ್ಲಿ ನಟಿಸಿದ್ದಾರೆ. Clean Slate Films Private Limited ನಿರ್ಮಿಸಿದ ‘ಕೊಹ್ರಾ’ ಇದೇ ಜುಲೈ 15ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಜೆನಿಲಿಯಾ – ಮಾನವ್‌ ಕೌಲ್‌ ‘ಟ್ರೈಯಲ್‌ ಪೀರಿಯಡ್‌’ | ಜುಲೈ 21ರಿಂದ JioCinemaದಲ್ಲಿ
Next article‘ಮಾಮ್ಮನ್ನನ್’ : ಗಟ್ಟಿ ಕಾಳು ರೊಟ್ಟಿ ಹಸಿ

LEAVE A REPLY

Connect with

Please enter your comment!
Please enter your name here