ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ BiggBoss 10ನೇ ಸೀಸನ್‌ಗೆ ಚಾಲನೆ ಸಿಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಪ್ರೋಮೊ ಬಿಡುಗಡೆಯಾಗಿದೆ. ನಿರೂಪಕ ಸುದೀಪ್ ಕಾಣಿಸಿಕೊಂಡದ್ದು, ವೀಡಿಯೋದಲ್ಲಿ ಶೋ ಕುರಿತು ಮಾಹಿತಿ ನೀಡುವ ಒಂದು ಕತೆ ಮಾಡಿದ್ದಾರೆ.
‘ಬಿಗ್ ಬಾಸ್’ 10ನೇ ಸೀಸನ್ ಸದ್ಯದಲ್ಲೇ ಶುರುವಾಗಲಿದೆ. ಒಂಬತ್ತು ಯಶಸ್ವೀ ಸೀಸನ್ಗಳನ್ನು ಮುಗಿಸಿ ಈಗ ಹತ್ತನೇ ಸೀಸನ್‌ಗೆ ತಯಾರಿ ನಡೆದಿದೆ. ಪೂರ್ವಭಾವಿಯಾಗಿ ಪ್ರೋಮೊ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಮೊದಲ ಪ್ರೋಮೊ ಬಿಡುಗಡೆಯಾಗಿತ್ತು. ಅದರಲ್ಲಿ ಸಿಸಿಟಿವಿ ದೃಶ್ಯಗಳ ಮಾದರಿಯ ದೃಶ್ಯಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ‘ಬಿಗ್ ಬಾಸ್’ ರಿಯಾಲಿಟಿ ಶೋ ಅನ್ನು ನೂರು ದಿನಗಳ ಹಬ್ಬ ಎಂದು ಪ್ರೋಮೋನಲ್ಲಿ ಕರೆದಿದ್ದು, ಇಡೀ ಊರೇ ಹಬ್ಬ ಆಚರಿಸಲು ಸಿದ್ಧವಾಗುತ್ತಿರುವಂತೆ ಚಿತ್ರಿಸಲಾಗಿದೆ. ಸುದೀಪ್ ಕೋಣೆಯೊಂದರಲ್ಲಿ ಕುಳಿತು ಚದುರಂಗದ ಆಟ ಆಡುತ್ತಿರುವ ದೃಶ್ಯಗಳು ಪ್ರೋಮೋನಲ್ಲಿವೆ. ಆದರೆ ಶೋ ಯಾವಾಗಿನಿಂದ ಎನ್ನುವ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಆಟೋ ಡ್ರೈವರ್ಗಳು, ಇಳಿವಯಸ್ಸಿನವರು, ಚಿಕ್ಕಮಕ್ಕಳು, ಯುವಕರು ಎಲ್ಲರೂ ‘ಬಿಗ್ಬಾಸ್’ಗೆ ಕಾಯುತ್ತಿದ್ದಾರೆ ಎಂದು ಸೂಚಿಸುವ ದೃಶ್ಯಗಳು ಇದೀಗ ಬಿಡುಗಡೆ ಆಗಿರುವ ಪ್ರೋಮೊದಲ್ಲಿವೆ. ಜೊತೆಗೆ ‘ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ ಹ್ಯಾಪಿ ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್’ ಎಂಬ ಕ್ಯಾಪ್ಷನ್ ಜೊತೆಗೆ ಪ್ರೋಮೋ ವಿಡಿಯೋವನ್ನು ಕಲರ್ಸ್ ಹಂಚಿಕೊಂಡಿದೆ.
ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY 'BIGG BOSS KANNADA' ಹತ್ತನೇ ಸೀಸನ್! #BiggBossKannada #BBK10 #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ @KicchaSudeep pic.twitter.com/qCQkXGkQgI
— Colors Kannada (@ColorsKannada) September 14, 2023
ಪ್ರೋಮೊ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ನೋಡಿ ಕಾಮೆಂಟ್ ಮಾಡಿದ್ದಾರೆ. ಇದು ಹತ್ತನೇ ಸೀಸನ್ ಆಗಿರುವ ಕಾರಣ ಶೋ ಕೊಂಚ ಭಿನ್ನವಾಗಿ, ಅದ್ಧೂರಿಯಾಗಿರಲಿದೆ ಎನ್ನಲಾಗಿದೆ. ಸಾಮಾನ್ಯರೂ ಈ ಬಾರಿ ಬಿಗ್ಬಾಸ್ ಮನೆ ಸೇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ‘ಬಿಗ್ಬಾಸ್ 10’ ಮೊದಲ ಪ್ರೋಮೊ ಈ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿತ್ತು. ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ಸಾಮಾನ್ಯ. ಕಳೆದ ಬಾರಿಯಂತೆ ಅನುಭವಿ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳ ನಡುವೆ ಸ್ಪರ್ಧೆ ಮಾಡಿಸುತ್ತಾರೆಯೇ? ಅಥವಾ ಈ ಬಾರಿ ಸಂಪೂರ್ಣ ಹೊಸಬರನ್ನೇ ಕರೆತರುತ್ತಾರೆಯೇ ಎಂದು ಕಾದು ನೋಡಬೇಕಿದೆ.