ಆಕ್ಷನ್‌ ಹೀರೋ ವಿನೋದ್‌ ಪ್ರಭಾಕರ್‌ ತಮ್ಮ ತಂದೆ, ನಟ ಟೈಗರ್‌ ಪ್ರಭಾಕರ್‌ ನೆನಪಿನಲ್ಲಿ ‘ಟೈಗರ್‌ ಟಾಕೀಸ್‌’ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ನಟ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದ ನಿರ್ದೇಶಕ ಪ್ರಮೋದ್‌ ಕುಮಾರ್‌.

ಕಳೆದವರ್ಷ ತೆರೆಕಂಡ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರು ‘ಟೈಗರ್‌ ಟಾಕೀಸ್‌’ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ತಂದೆ ಪ್ರಭಾಕರ್‌ ನೆನಪು, ಸ್ಮರಣೆಯೊಂದಿಗೆ ಅವರ ಹೊಸ ಯೋಜನೆಗೆ ಚಾಲನೆ ಸಿಕ್ಕಿದೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ‘ಲಂಕಾಸುರ’ ಸೆಟ್ಟೇರಿದ್ದು, ವಿನೋದ್‌ ಪ್ರಭಾಕರ್‌ ತಮ್ಮ ಪತ್ನಿ ನಿಶಾ ಅವರನ್ನು ನಿರ್ಮಾಪಕರನ್ನಾಗಿಸಿದ್ದಾರೆ. ಚಿತ್ರದಲ್ಲಿ ‘ಲೂಸ್‌ ಮಾದ’ ಯೋಗಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಪ್ರಮೋದ್‌ ಕುಮಾರ್‌ ಡಿ.ಎಸ್‌. ಚಿತ್ರ ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆದಿದೆ.

“ನಮ್ಮ ತಂದೆ ಪ್ರಭಾಕರ್‌ ಅವರನ್ನು ಜನರು ಟೈಗರ್‌ ಎಂದೇ ಪ್ರೀತಿಯಿಂದ ಕರೆದು ಅಭಿಮಾನ ತೋರಿದ್ದರು. ಅವರ ನೆರಳಿನಲ್ಲಿ ಬೆಳೆದ ನನ್ನನ್ನೂ ಪ್ರೀತಿಯಿಂದ ಕಾಣುತ್ತಿದ್ದಾರೆ. ತಂದೆಯ ಹೆಸರಿನಲ್ಲಿ ಚಿತ್ರನಿರ್ಮಾಣ ಸಂಸ್ಥೆ ಶುರುವಾಗಿದೆ. ನಮ್ಮ ನಿರ್ಮಾಣ ಸಂಸ್ಥೆಯಡಿ ವಿಶಿಷ್ಟ ಸಿನಿಮಾಗಳು ತಯಾರಾಗಲಿವೆ” ಎಂದಿದ್ದಾರೆ ವಿನೋದ್‌. ದೇವರಾಜ್, ರವಿಶಂಕರ್ ಇತರರು ತಾರಾಬಳಗದಲ್ಲಿದ್ದಾರೆ. ಆಕ್ಷನ್ ಕಥಾಹಂದರದ ಚಿತ್ರಕ್ಕೆ ಡಿಫರೆಂಟ್‌ ಡ್ಯಾನಿ, ವಿ‌ನೋದ್, ಕುಂಫೂ ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ಸಂಯೋಜಿಸುತ್ತಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಸಂಯೋಜನೆ, ಭರ್ಜರಿ ಚೇತನ್ ಗೀತರಚನೆ, ಸುಜ್ಞಾನ್ ಛಾಯಾಗ್ರಹಕಣ, ಮುರಳಿ, ಮೋಹನ್ ನೃತ್ಯ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

Previous articleಮಾಧುರಿ, ಕಮಲ ಹಾಸನ್‌ರಿಗೆ ಕೊರಿಯೋಗ್ರಫಿ ಮಾಡಿದ್ದರು ಬಿರ್ಜು ಮಹರಾಜ್‌
Next articleಅಸ್ತಿತ್ವದ ಹುಡುಕಾಟ, ಹಳ್ಳಿಗಾಡಿನ ಮುಗ್ಧತೆಯ ಅನಾವರಣ

LEAVE A REPLY

Connect with

Please enter your comment!
Please enter your name here