ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ವೈವಾಹಿಕ ಜೀವನಕ್ಕೆ ಈಗ 44ರ ಹರೆಯ. ಒಟ್ಟಿಗೆ ಸಿನಿಮಾ ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಈ ಜೋಡಿ 1980ರಲ್ಲಿ ವಿವಾಹವಾದರು. ಈಗ ತಮ್ಮ 44ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಬಾಲಿವುಡ್‌ ಹೀ-ಮ್ಯಾನ್‌ ಎಂದೇ ಖ್ಯಾತರಾಗಿರುವ ಹಿರಿಯ ಬಾಲಿವುಡ್‌ ನಟ ಧರ್ಮೇಂದ್ರ ಹಾಗೂ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಇತ್ತೀಚೆಗೆ ತಮ್ಮ 44ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ತಮ್ಮ ಮದುವೆ ಆನಿವರ್ಸರಿ ಚಿತ್ರಗಳನ್ನು ಹೇಮಾ ಮಾಲಿನಿ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ನವ ವಧುವರರಂತೆ ಸಿಂಗಾರ ಮಾಡಿಕೊಂಡು ದೊಡ್ಡ ಹಾರ ಹಾಕಿಕೊಂಡಿರುವ ಈ ಜೋಡಿಯ ಫೋಟೋ ವೈರಲ್‌ ಆಗಿದ್ದು, ನೆಟ್ಟಿಗರು ಶುಭಹಾರೈಸುತ್ತಿದ್ದಾರೆ. ಅಪ್ಪ ಅಮ್ಮನ ಈ ಸಂಭ್ರಮದಲ್ಲಿ ಮಗಳು ಈಶಾ ಡಿಯೋಲ್‌ ಸಹ ಭಾಗಿಯಾಗಿರೋದು ಫೋಟೋವೊಂದರಿಂದ ತಿಳಿಯುತ್ತದೆ.

ಈ ಜೋಡಿಯ ಮೊದಲ ಭೇಟಿಯಾಗಿದ್ದು 1970ರಲ್ಲಿ ‘ತುಮ್ ಹಸೀ ಮೇ ಜವಾನ್’ ಸಿನಿಮಾದ ಸೆಟ್​ನಲ್ಲಿ. ಅಂದಿನ ಕಾಲಕ್ಕೆ ಹಿಟ್‌ ಜೋಡಿ ಎನಿಸಿಕೊಂಡಿದ್ದ ಹೇಮಾ ಹಾಗೂ ಧರ್ಮೇಂದ್ರ ಸಾಕಷ್ಟು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ವಿವಾಹಿತರಾಗಿದ್ದ ಧರ್ಮೇಂದ್ರ, ನಟ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ವಿವಾಹವಾದರು. ಅದಾಗಲೇ ವಿವಾಹವಾಗಿ ಮಕ್ಕಳಿದ್ದ ಧರ್ಮೇಂದ್ರ ಮೊದಲ ಪತ್ನಿಯಿಂದ ದೂರಾಗಿ 1980ರಲ್ಲಿ ಹೇಮಾ ಮಾಲಿನಿ ಜೊತೆ ಸಪ್ತಪದಿ ತುಳಿದರು. ನಂತರದಲ್ಲಿ ಈ ಸ್ಟಾರ್‌ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಾದರು. ಅವರೇ ಇಶಾ ಡಿಯೋಲ್ ಹಾಗೂ ಅಹಾನಾ ಡಿಯೋಲ್. ಸದ್ಯ ಹೇಮಾ ಮಾಲಿನಿ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here