ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ವಿಜಯಲಕ್ಷ್ಮಿ ದರ್ಶನ್‌ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ನಿತ್ಯದ ಕೆಲಸಗಳಿಂದ ಬಿಡುವು ಪಡೆದು ಎಂಜಾಯ್‌ ಮಾಡ್ತಿದ್ದಾರೆ. ಪ್ರವಾಸ ಫೋಟೋಗಳ ಜೊತೆಗೆ ತಮ್ಮ ಪ್ರಯಾಣದ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ‘ಕಾಟೇರ’ ಚಿತ್ರ ನೂರು ದಿನಗಳ ಯಶಸ್ವೀ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿರುವ ನಟ ಚಿತ್ರತಂಡದ ಜೊತೆ ಸಂಭ್ರಮಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ‘ಕಾಟೇರ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಹೊಸ ಜಾಗಗಳಲ್ಲಿ ಸುತ್ತಾಡುತ್ತಾ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ತಮ್ಮ ಟ್ರಾವೆಲ್‌ ಜರ್ನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ತಮ್ಮ ಖುಷಿಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

‘ಸ್ವಲ್ಪ ವಿರಾಮ ತೆಗೆದುಕೊಂಡು ಒಮ್ಮೆ ಸುತ್ತಲೂ ನೋಡಿ… ಜೀವನ ಬಹಳ ಸುಂದರವಾಗಿದೆ’ ಎಂದು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಇವರು ಆಗಾಗ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ತಾವು ಯಾವುದಾರೂ ಪಕ್ಷಿಗಳನ್ನ ನೋಡಿ, ಅವುಗಳ ಜತೆ ಸಮಯ ಕಳೆದಾಗ, ಎಲ್ಲಾದರೂ ಹೋದಾಗ ಹೀಗೆ ಪುಟ್ಟ ಪುಟ್ಟ ವಿಷಯಗಳನ್ನೂ ಫೋಟೋ ಸಹಿತ ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

ವಿಜಯಲಕ್ಷ್ಮಿ ದರ್ಶನ್‌ ಸೆಲೆಬ್ರಿಟಿ ಮಡದಿ ಮಾತ್ರವಲ್ಲ. ಉದಯೋನ್ಮುಖ ಉದ್ಯಮಿಯೂ ಹೌದು. ‘ಮೈ ಫ್ರೆಶ್‌ ಬ್ಯಾಸ್ಕೆಟ್‌’ ಎಂಬ ಆನ್‌ಲೈನ್ ಆಪ್ ಆರಂಭಿಸಿ, ರೈತರಿಗೆ ನೆರವಾಗುವಂತೆ ವ್ಯಾಪಾರ ಶುರು ಮಾಡಿದ್ದರು. ಆ ಆಪ್ ಬಳಸಿ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಿತ್ತು. ಇದರಿಂದಾಗಿ ರೈತರಿಂದ ಹಣ್ಣು- ತರಕಾರಿ ನೇರವಾಗಿ ಗ್ರಾಹಕರ ಮನೆ ತಲುಪುತ್ತಿದ್ದವು. ವಿಜಯಲಕ್ಷ್ಮಿ ಅವರ ಈ ಐಡಿಯಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಈ ಕೆಲಸಕ್ಕೆ ‘ಟೈಮ್ಸ್ ಬಿಸಿನೆಸ್’ ಅವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ವಿಷಯವನ್ನು ಸ್ವತಃ ವಿಜಯಲಕ್ಷ್ಮಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here