ಖ್ಯಾತ ತೆಲುಗು ನಟ ರಾಜೀವ್‌ ಕಣಕಾಲ ಅವರ ಪುತ್ರ ರೋಷನ್‌ ಕಣಕಾಲ ನಟನೆಯ ‘ಬಬಲ್‌ಗಮ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ರವಿಕಾಂತ್‌ ಪೆರೆಪು ನಿರ್ದೇಶನದ ಈ ಚಿತ್ರದ ನಾಯಕಿ ಮಾನಸ ಚೌಧರಿ.

ರವಿಕಾಂತ್ ಪೆರೆಪು ನಿರ್ದೇಶನದ ‘ಬಬಲ್‌ಗಮ್‌’ ತೆಲುಗು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೂರದರ್ಶನದ ಖ್ಯಾತ ನಿರೂಪಕಿ ಮಾನಸ ಚೌಧರಿ ಮತ್ತು ಜನಪ್ರಿಯ ನಟ ರಾಜೀವ್ ಕಣಕಾಲ ಅವರ ಪುತ್ರ ರೋಷನ್ ಕಣಕಾಲ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ್ದಾರೆ. ಮನುಷ್ಯನ ಪ್ರೀತಿಯನ್ನು ಬಬಲ್‌ಗಮ್‌ಗೆ ಹೋಲಿಸುವ ರೀತಿ ‘ಜೀವನ ಒಂದು ರೀತಿ ಬಬಲ್‌ಗಮ್‌ ಇದ್ದ ಹಾಗೆ ಮೊದಮೊದಲು ಸಿಹಿಯಾಗಿರುತ್ತೆ. ನಂತರ ಅದರ ಅಸಲಿ ರುಚಿ ತಿಳಿಯುತ್ತದೆ’ ಎಂಬ ವಾಯ್ಸ್‌ ಓವರ್‌ನೊಂದಿಗೆ ಟೀಸರ್‌ ಆರಂಭವಾಗುತ್ತದೆ. ಆದಿತ್ಯ ಪಾತ್ರದಲ್ಲಿ ನಟಿಸಿರುವ ರೋಷನ್ ಡಿಜೆ (DJ) ಆಗಿ ಕೆಲಸ ಮಾಡುತ್ತಿರುತ್ತಾನೆ. ಒಂದು ಪಾರ್ಟಿಯ ಸಂದರ್ಭದಲ್ಲಿ ಜಾನ್ವಿಯತ್ತ (ಮಾನಸ) ಆಕರ್ಷಿತನಾಗುತ್ತಾನೆ. ಇವರಿಬ್ಬರ ಮಧ್ಯೆ ಪ್ರೀತಿ ಮೂಡಿ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ.

ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್ ಅನ್ನು ಎಸ್ ಎಸ್ ರಾಜಮೌಳಿ ಇತ್ತೀಚೆಗೆ ಅನಾವರಣಗೊಳಿಸಿದ್ದರು. ಈಗ ನಟ ನಾನಿ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಲನಚಿತ್ರವನ್ನು Maheshwari Movies ಮತ್ತು People Media Factory ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗಿದೆ. ಅನನ್ಯಾ ಅಕುಲಾ, ಹರ್ಷವರ್ಧನ್, ಅನು ಹಸನ್, ಜೈರಾಮ್ ಈಶ್ವರ್, ಬಿಂದು ಚಂದ್ರಮೌಳಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿಕಾಂತ್ ಪೆರೆಪು, ವಿಷ್ಣು ಕೊಂಡೂರು ಮತ್ತು ಸೆರಿ-ಗನ್ನಿ ಚಿತ್ರಕ್ಕೆ ಕತೆ ಬರೆದಿದ್ದು, ಶ್ರೀಚರಣ್ ಪಕಳ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ರಾಗುಟು ಛಾಯಾಗ್ರಹಣ, ನಿಶಾದ್ ಯೂಸುಫ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here