ಬಹುಭಾಷಾ ನಟಿ ಸಮಂತಾ ನಟನೆಯಿಂದ ಒಂದು ವರ್ಷ ವಿರಾಮ ಪಡೆಯುವುದಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮನ್ನು ಕಾಡುತ್ತಿರುವ ಮಯೋಸಿಟಿಸ್‌ ಕಾಯಿಲೆಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವುದು ಅವರ ಯೋಜನೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನಟಿಯ ಅಭಿಮಾನಿಗಳು ಸಲಹೆ ಮಾಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ನಟನಾ ವೃತ್ತಿಜೀವನದಿಂದ ಒಂದು ವರ್ಷದ ವ್ಯಾಪಕ ವಿರಾಮ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಸಮಂತಾ ಬ್ರೇಕ್ ಯಾಕೆ ತೆಗೆದುಕೊಳ್ಳುತ್ತಿದ್ದಾರೆ? ಎಂಬ ಅಭಿಮಾನಿಗಳ ಕುತೂಹಲಕ್ಕೆ ನಟಿ ಪ್ರತಿಕ್ರಿಯಿಸಿದ್ದಾರೆ. ಸಮಂತಾ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಅವರ ಮಯೋಸಿಟಿಸ್ ಕಾಯಿಲೆಯ ಚಿಕಿತ್ಸೆಗಾಗಿ US ಗೆ ತೆರಳಲು ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಸಮಂತಾ ಪ್ರಸ್ತುತ ತನ್ನ ಮುಂಬರುವ ಯೋಜನೆಗಳಾದ ‘ಖುಶಿ’ ಚಲನಚಿತ್ರ ಮತ್ತು ‘ಸಿಟಾಡೆಲ್’ ಸೀರಿಸ್‌ನ ಹಿಂದಿ ರೂಪಾಂತರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಖುಶಿ’ ಚಿತ್ರದಲ್ಲಿ ಅವರು ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿದ್ದು, ಶೂಟಿಂಗ್ ಶೆಡ್ಯೂಲ್ ಇನ್ನೇನು ಮುಗಿಯಲಿದೆ. ‘ಸಿಟಾಡೆಲ್’ನ ಭಾರತೀಯ ಆವೃತ್ತಿಯ ಚಿತ್ರೀಕರಣವನ್ನೂ ಅವರು ಶೀಘ್ರದಲ್ಲೇ ಪೂರ್ಣಗೊಳಿಸಲಿದ್ದು, ಅವರು ನಟ ವರುಣ್ ಧವನ್ ಜೊತೆಗೆ ಈ ಸರಣಿಯಲ್ಲಿ ನಟಿಸಲಿದ್ದಾರೆ. ಈ ಒಪ್ಪಂದಗಳನ್ನು ಪೂರೈಸಿದ ನಂತರ ಅವರು ಯಾವುದೇ ಹೊಸ ತೆಲುಗು ಅಥವಾ ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳ ನಿರ್ಮಾಪಕರಿಗೆ ಮುಂಗಡ ಪಾವತಿಗಳನ್ನು ಹಿಂದಿರುಗಿಸಿದ್ದು, ನಟನೆಯಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ.

https://www.instagram.com/p/CtgZ6RGrjeC/?utm_source=ig_web_copy_link

Previous articleನಾಳೆ ಶಿವರಾಜ್‌ ಹುಟ್ಟುಹಬ್ಬಕ್ಕೆ ‘ಘೋಸ್ಟ್‌’ ಸ್ಪೆಷಲ್‌ ವೀಡಿಯೋ | ಶ್ರೀನಿ ನಿರ್ದೇಶನದ ಸಿನಿಮಾ
Next article‘OMG 2’ ಟೀಸರ್ | ಅಕ್ಷಯ್‌ ಕುಮಾರ್‌ ಹಿಂದಿ ಸಿನಿಮಾ ಆಗಸ್ಟ್‌ 11ರಂದು ತೆರೆಗೆ

LEAVE A REPLY

Connect with

Please enter your comment!
Please enter your name here