‘ಕಲ್ಕಿ 2898 AD’ ಚಿತ್ರದ ನಿರ್ಮಾಪಕರು ‘B&B’ ಅನಿಮೇಷನ್‌ ಸರಣಿಗಳನ್ನು ರಿಲೀಸ್‌ ಮಾಡಿದ್ದಾರೆ. ಈ ಸರಣಿಗೂ, ‘ಕಲ್ಕಿ 2898 AD’ ಕತೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಚಿತ್ರದ ನಿರ್ದೇಶಕ ನಾಗ್‌ ಅಶ್ವಿನ್‌. ಹದಿನೈದು ನಿಮಿಷಗಳ ಎರಡು ಭಾಗಗಳಲ್ಲಿ ‘B&B’ ಪ್ರೈಮ್‌ ವೀಡಿಯೋದಲ್ಲಿ ಇಂದಿನಿಂದ (ಮೇ 31) ಸ್ಟ್ರೀಮ್‌ ಆಗುತ್ತಿದೆ.

ಈ ವರ್ಷದ ಬಹುನಿರೀಕ್ಷಿತ ಹಿಂದಿ ಮತ್ತು ತೆಲುಗು ದ್ವಿಭಾಷಾ ಸಿನಿಮಾ ‘ಕಲ್ಕಿ 2898 AD’ ನಿರ್ಮಾಪಕರು ಹೊಸ ರೀತಿಯ ಪ್ರಚಾರ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಿನಿಮಾ ನಿರ್ಮಿಸಿರುವ ವೈಜಯಂತಿ ಮೂವೀಸ್ ‘B&B’ ಅನಿಮೇಷನ್‌ ಸರಣಿಗಳನ್ನು ಬಿಡುಗಡೆಗೊಳಿಸಿದೆ. ಈದು ಈವರೆಗೆ ಯಾರೂ ಮಾಡಿರದ ವಿನೂತನ ಪ್ರಯೋಗ. ಪ್ರಭಾಸ್ ಅವರು ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್) ಪಾತ್ರವಿದೆ‌. ಈ ಎರಡು ಪಾತ್ರಗಳೊಂದಿಗೆ ಚಿತ್ರತಂಡ ‘B&B’ ಶೀರ್ಷಿಕೆಯಡಿ ಹದಿನೈದು ನಿಮಿಷಗಳ ಎರಡು ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಿದೆ. ಈ ಸರಣಿ ಇಂದಿನಿಂದ (ಮೇ 31) ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿವೆ.

ಈ ಬಗ್ಗೆ ಮಾತನಾಡಿರುವ ‘ಕಲ್ಕಿ 2898 AD’ ನಿರ್ದೇಶಕ ನಾಗ್‌ ಅಶ್ವಿನ್‌, ‘ಇದು ಚಿತ್ರದ ಪ್ರಚಾರಕ್ಕಷ್ಟೇ ಮಾಡಿರುವ ಅನಿಮೇಷನ್‌ ಸರಣಿ. ಚಿತ್ರದ ಕತೆಯೇ ಬೇರೆ. ಇದೇ ಬೇರೆ’ ಎಂದಿದ್ದಾರೆ. ‘ಕಲ್ಕಿ 2898 AD’ ಚಿತ್ರವನ್ನು ಕರ್ನಾಟಕದಲ್ಲಿ KVN ಪ್ರೊಡಕ್ಷನ್ಸ್‌ ವಿತರಣೆ ಮಾಡುತ್ತಿದೆ. ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸಿದ್ದಾರೆ. ಇದೇ ಜೂನ್‍ 27ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here