ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು Penn Masala Cappella band ಬಾಲಿವುಡ್ ಸಾಂಗ್‌ಗಳ ಮೂಲಕ ಸ್ವಾಗತಿಸಿದೆ. ಬಾಲಿವುಡ್ ಕ್ಲಾಸಿಕ್ ಗೀತೆಗಳನ್ನು ಕೇಳುತ್ತಾ ಬೆಳೆದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 90ರ ದಶಕದಿಂದಲೂ Cappella band ಮೂಲಕ ಕಾರ್ಯಕ್ರಮ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 22ರಂದು ಅಮೇರಿಕಾಗೆ ಭೇಟಿ ನೀಡಿದ್ದರು. ಗುರುವಾರ ಮೋದಿಯವರಿಗಾಗಿ ಸೌತ್ ಲಾರೆನ್ಸ್‌ನಲ್ಲಿ ಜರುಗಿದ ಸ್ವಾಗತ ಸಮಾರಂಭದಲ್ಲಿ Penn Masala Cappella Band ಜನಪ್ರಿಯ ಬಾಲಿವುಡ್ ಗೀತೆಗಳಾದ ‘ಚೈಯಾ ಚೈಯಾ’ ಮತ್ತು ‘ಜಶ್ನ್ ಎ ಬಹಾರಾ’ ಗೀತೆಗಳನ್ನು ಪ್ರದರ್ಶಿಸಿ, ಭಾರತದ ಪ್ರಧಾನಿಯನ್ನು ಬರಮಾಡಿಕೊಂಡಿದೆ. Penn Masala Cappella Band ಮೊದಲು ಶಾರುಖ್ ಖಾನ್ ಅಭಿನಯದ ‘ದಿಲ್ ಸೆ’ ಚಿತ್ರದ ‘ಚೈಯಾ ಚೈಯಾ’ ಗೀತೆ, ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅಭಿನಯದ ಐತಿಹಾಸಿಕ ‘ಜೋಧಾ ಅಕ್ಬರ್’ ಚಿತ್ರದಿಂದ ‘ಜಶ್ನ್ ಎ ಬಹಾರಾ’ ಗೀತೆ ಜೊತೆಗೆ ಬ್ರಿಟಿಷ್ ರಾಕ್ ಬ್ಯಾಂಡ್ ‘ಕೋಲ್ಡ್‌ಪ್ಲೇ’ ಆಲ್ಬಮ್‌ನಿಂದ ಹಿಟ್ ಟ್ರ್ಯಾಕ್ ‘ವಿವಾ ಲಾ ವಿಡಾ’ ಹಾಡನ್ನು ಪ್ರದರ್ಶಿಸಿತು.
#WATCH | Penn Masala's rendition of the popular song 'Chaiyya Chaiyya' enchants crowds gathered at the White House for PM Modi's arrival pic.twitter.com/oc1VjOKDam
— ANI (@ANI) June 22, 2023
Penn Masala Cappella Band ಮೂಲ ಸಂಯೋಜನೆಗಳಿಗೆ ಹೆಸರುವಾಸಿಯಾಗಿದೆ. ಈ Musician cappella band ವಿವಿಧ ಸಂಪ್ರದಾಯಗಳನ್ನು ಒಳಗೊಂಡ, ಪೂರ್ವ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳ ಬೆಸುಗೆಯ ಸಂಯೊಜನೆಗಳಲ್ಲಿ ಅಳವಡಿಸಿಕೊಳ್ಳುತ್ತದೆ. ಬಾಲಿವುಡ್ ಕ್ಲಾಸಿಕ್ ಗೀತೆಗಳನ್ನು ಕೇಳುತ್ತಾ ಬೆಳೆದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ 90ರ ದಶಕದ ಈ Cappella band ಈ ಹಿಂದೆ ಅನೇಕ ಸಂದರ್ಭಗಳಲ್ಲಿ ವೈಟ್ ಹೌಸ್‌ನಲ್ಲಿ ಪ್ರದರ್ಶನ ನೀಡಿತ್ತು. ಮೋದಿ ಆಗಮನದ ಮೊದಲು ಸೌತ್ ಲಾರೆನ್ಸ್‌ನ ಶ್ವೇತಭವನದಲ್ಲಿ ಅನಿವಾಸಿ ಭಾರತೀಯರ ದೊಡ್ಡ ಗುಂಪು ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಜಮಾಯಿಸಿತ್ತು.