ಸಾಹಿಲ್‌ ಸಂಘ ನಿರ್ದೇಶನದ ‘ಕಫಾಸ್‌’ ಹಿಂದಿ ಸರಣಿ ಇಂದಿನಿಂದ (ಜೂನ್‌ 23) SonyLivನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಮಧ್ಯಮ ವರ್ಗದ ಕನಸು, ಅವುಗಳನ್ನು ಈಡೇರಿಸಿಕೊಳ್ಳುವಲ್ಲಿನ ಸವಾಲು, ಅಧಿಕಾರಿ ವರ್ಗದ ಆಮಿಷಗಳ ಸುತ್ತ ಹೆಣೆದ ಕತೆ. ಶರ್ಮನ್‌ ಜೋಷಿ ಮತ್ತು ಮೋನಾ ಸಿಂಗ್‌ ಮುಖ್ಯ ಪಾತ್ರಗಳಲ್ಲಿದ್ದಾರೆ.

‘ಮಧ್ಯಮ ವರ್ಗದ ಯುವಕನೊಬ್ಬ ಕಚೇರಿಯಲ್ಲಿ ಎದುರಿಸುವ ಸಮಸ್ಯೆ – ಸವಾಲುಗಳು, ಸತ್ಯ ಮತ್ತು ನ್ಯಾಯದ ಮೇಲೆ ಆತನ ಮೇಲಧಿಕಾರಿಗಳು ನಡೆಸುವ ದಬ್ಬಾಳಿಕೆ, ಸವಾಲುಗಳನ್ನು ಎದುರಿಸಲಾಗದ ಆತನ ಅಸಹಾಯಕತೆಯ ಸುತ್ತ ಕತೆ ಹೆಣೆಯಲಾಗಿದ್ದು, ಎಲ್ಲರಿಗೂ ಕನೆಕ್ಟ್‌ ಆಗುತ್ತದೆ’ ಎನ್ನುತ್ತಾರೆ ‘Kafas’ ನಿರ್ದೇಶಕ ಸಾಹಿಲ್‌ ಸಂಘ. ‘3 ಈಡಿಯಟ್ಸ್‌’ ಖ್ಯಾತಿಯ ಶರ್ಮನ್‌ ಜೋಷಿ ಮತ್ತು ಮೋನಾ ಸಿಂಗ್‌ ಮುಖ್ಯಪಾತ್ರಗಳಲ್ಲಿ ನಟಿಸಿರುವ ಸರಣಿಯಿದು. ಶರ್ಮನ್‌ ಮತ್ತು ಮೋನಾ ಅವರು ಬಾಯಿಗೆ ಟೇಪ್‌ ಅಂಟಿಸಿದ್ದ ಪೋಸ್ಟರ್‌ ಸರಣಿ ಕುರಿತಾಗಿ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಸಾಮಾಜಿಕ ಮತ್ತು ಕೌಟುಂಬಿಕ ಕಥಾಹಂದರವಿರುವ ಸರಣಿಗೆ ಸುಭಾಷ್‌ ಕಪೂರ್‌ ಚಿತ್ರಕಥೆ ರಚಿಸಿದ್ದಾರೆ. ಅಪ್ಲೌಸ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ಸರಣಿ ಇಂದಿನಿಂದ SonyLivನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here