‘ಚಾರ್ಲಿ’ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣಿರು ಹಾಕಿದ್ದಾರೆ. ಕಳೆದ ವರ್ಷ ಅವರ ಮನೆಯ ಪ್ರೀತಿಯ ಸಾಕುನಾಯಿ Snooby ಅಸುನೀಗಿತ್ತು. ‘ಚಾರ್ಲಿ’ ಅವರಿಗೆ Snoobyಯನ್ನು ನೆನಪಿಸಿದೆ.

ನಿನ್ನೆ ಏರ್ಪಡಿಸಿದ್ದ ‘777 ಚಾರ್ಲಿ’ ವಿಶೇಷ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರೊಂದಿಗೆ ಕೆಲವು ಸಚಿವರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಣೆಯ ನಂತರ ಪ್ರತಿಕ್ರಿಯೆ ನೀಡುವ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅವರ ಮನೆಯಲ್ಲಿದ್ದ ಸಾಕುನಾಯಿ Snooby ಕಳೆದ ವರ್ಷ ಅಸುನೀಗಿತ್ತು. ‘ಚಾರ್ಲಿ’ಯಲ್ಲಿ ಅಗಲಿದ ತಮ್ಮ ಸಾಕುನಾಯಿಯನ್ನು ಕಂಡ ಬೊಮ್ಮಾಯಿ ಭಾವುಕರಾಗಿದ್ದಾರೆ. “ಈ ಹಿಂದೆ ನಾಯಿ ಕುರಿತಾಗಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಇದು ವಿಶೇಷವಾಗಿದೆ. ನಾಯಿಯ ಪ್ರೀತಿ unconditional ಮತ್ತು ಪವಿತ್ರವಾದುದು. ಅವು ಕಣ್ಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಇಂತಹ ಒಳ್ಳೆಯ ಸಿನಿಮಾ ಮಾಡಿರುವ ಚಿತ್ರತಂಡಕ್ಕೆ ಅಭಿನಂದನೆಗಲೂ. ಎಲ್ಲರೂ ಈ ಚಿತ್ರವನ್ನು ವೀಕ್ಷಿಸಬೇಕು” ಎಂದಿದ್ದಾರವರು. CM ಭಾವುಕ ಫೋಟೊಗಳು, ಜೊತೆಗೆ ಕಳೆದ ವರ್ಷ ಅಸುನೀಗಿದ ಸಾಕುನಾಯಿಗಾಗಿ ಕಂಬನಿ ಮಿಡಿದ ಅವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ.

LEAVE A REPLY

Connect with

Please enter your comment!
Please enter your name here