ನಿನ್ನೆ ಮುಂಬಯಿಯಲ್ಲಿ 2022ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ ಸಮಾರಂಭ ನಡೆಯಿತು. ನಟಿ ಕೃತಿ ಸನೂನ್ ‘ಮಿಮಿ’ ಹಿಂದಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ‘ಪುಷ್ಪ’ ವರ್ಷದ ಸಿನಿಮಾ ಗೌರವಕ್ಕೆ ಪಾತ್ರವಾಗಿದೆ. ಇಲ್ಲಿದೆ ಪ್ರಶಸ್ತಿ ಪಟ್ಟಿ.
ಮುಂಬಯಿಯಲ್ಲಿ ನಿನ್ನೆ ಸಂಜೆ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ವರ್ಷದ ಸಿನಿಮಾ ಎಂದು ಘೋಷಣೆಯಾದರೆ, ರಣವೀರ್ ಸಿಂಗ್ (ಅತ್ಯುತ್ತಮ ನಟ), ಕೃತಿ ಸನೂನ್ (ಮಿಮಿ), ಮನೋಜ್ ಬಾಜಪೈ (ವೆಬ್ ಸರಣಿ), ರವೀನಾ ಟಂಡನ್ (ವೆಬ್ ಸರಣಿ), ಅನುಪಮ (ಟೀವಿ ಸೀರೀಸ್) ಮುಂತಾದವರು ಪ್ರಶಸ್ತಿ ಪಡೆದು ಸಂಭ್ರಮಿಸಿದರು. ಪ್ರಶಸ್ತಿಗಳ ಪೂರ್ಣ ಪಟ್ಟಿ ಇಲ್ಲಿದೆ.
- ಜೀವಮಾನ ಸಾಧನೆ ಗೌರವ – ನಟಿ ಆಶಾ ಪರೇಖ್
- ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ – ಅನದರ್ ರೌಂಡ್
- ಅತ್ಯುತ್ತಮ ನಿರ್ದೇಶಕ – ಕೆನ್ ಘೋಷ್ (ಸ್ಟೇಟ್ ಆಫ್ ಸೀಝ್: ಟೆಂಪಲ್ ಅಟ್ಯಾಕ್)
- ಅತ್ಯುತ್ತಮ ಛಾಯಾಗ್ರಹಣ – ಜಯಕೃಷ್ಣ ಗುಮ್ಮಡಿ (ಹಸೀನಾ ದುಲ್‌ರುಬಾ)
- ಅತ್ಯುತ್ತಮ ಪೋಷಕ ನಟ – ಸತೀಶ್ ಕೌಶಿಕ್ (ಕಾಗಝ್)
- ಅತ್ಯುತ್ತಮ ಪೋಷಕ ನಟಿ – ಲಾರಾ ದತ್ತಾ (ಬೆಲ್ ಬಾಟಮ್)
- ಅತ್ಯುತ್ತಮ ನಟ (ಖಳ) – ಆಯುಷ್ ಶರ್ಮಾ (ಅಂತಿಮ್: ದಿ ಫೈನಲ್ ಟ್ರಥ್)
- ಅತ್ಯುತ್ತಮ ನಟ (ಜನರ ಆಯ್ಕೆ) – ಅಭಿಮನ್ಯು ದಾಸಾನಿ
- ಅತ್ಯುತ್ತಮ ನಟಿ (ಜನರ ಆಯ್ಕೆ) – ರಾಧಿಕಾ ಮದನ್
- ವರ್ಷದ ಸಿನಿಮಾ – ಪುಷ್ಪ
- ಅತ್ಯುತ್ತಮ ಸಿನಿಮಾ – ಶೇರ್‌ಷಾ
- ಅತ್ಯುತ್ತಮ ನಟ – ರಣವೀರ್ ಸಿಂಗ್ (83)
- ಅತ್ಯುತ್ತಮ ನಟಿ – ಕೃತಿ ಸನೂನ್ (ಮಿಮಿ)
- ಅತ್ಯುತ್ತಮ ನಟ (ಪದಾರ್ಪಣೆ) – ಅಹಾನ್ ಶೆಟ್ಟಿ (ತಡಪ್)
- ಅತ್ಯುತ್ತಮ ವೆಬ್ ಸರಣಿ – ಕ್ಯಾಂಡಿ
- ಅತ್ಯುತ್ತಮ ನಟ (ವೆಬ್ ಸರಣಿ) – ಮನೋಜ್ ಭಾಜಪೈ (ಫ್ಯಾಮಿಲಿ ಮ್ಯಾನ್)
- ಅತ್ಯುತ್ತಮ ನಟಿ (ವೆಬ್ ಸರಣಿ) – ರವೀನಾ ಟಂಡನ್ (ಅರಣ್ಯಕ್)
- ಅತ್ಯುತ್ತಮ ಗಾಯಕ – ವಿಶಾಲ್ ಮಿಶ್ರಾ
- ಅತ್ಯುತ್ತಮ ಗಾಯಕಿ – ಕನಿಕಾ ಕಪೂರ್
- ಅತ್ಯುತ್ತಮ ಕಿರುಚಿತ್ರ – ಪೌಲಿ
- ಅತ್ಯುತ್ತಮ ಟೀವಿ ಸರಣಿ – ಅನುಪಮ
- ಅತ್ಯುತ್ತಮ ನಟ (ಟೀವಿ ಸರಣಿ) – ಶಹೀರ್ ಶೇಕ್ (ಕುಚ್ ರಂಗ್ ಪ್ಯಾರ್ ಕೆ ಐಸೀ ಭಿ)
- ಅತ್ಯುತ್ತಮ ನಟಿ (ಟೀವಿ ಸರಣಿ) – ಶ್ರದ್ಧಾ ಆರ್ಯ (ಕುಂಡಲಿ ಭಾಗ್ಯ)
- ಭರವಸೆಯ ನಟ (ಟೀವಿ) – ಧೀರಪ್ ಧೂಪರ್
- ಭರವಸೆಯ ನಟಿ (ಟೀವಿ) – ರೂಪಾಲಿ ಗಂಗೂಲಿ
- ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ) – ಸರ್ದಾರ್ ಉದಾಮ್
- ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) – ಸಿದ್ದಾರ್ಥ್ ಮಲ್ಹೋತ್ರಾ (ಶೆರ್‌ಷಾ)
- ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) – ಕೈರಾ ಅಡ್ವಾನಿ (ಶೇರ್‌ಷಾ)