ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾಗಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕಾಶ್ಮೀರ ನರಮೇಧದ ಸುತ್ತ ಹೆಣೆದಿರುವ ಕತೆಯಲ್ಲಿ ಮಿಥುನ್‌ ಚಕ್ರವರ್ತಿ, ಅನುಪಮ್‌ ಖೇರ್‌, ಪಲ್ಲವಿ ಜೋಷಿ, ಪ್ರಕಾಶ್‌ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

‘ದಿ ತಾಶ್ಕೆಂಟ್‌ ಫೈಲ್ಸ್‌’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದೊಂದಿಗೆ ಮರಳಿದ್ದಾರೆ. ಕಾಶ್ಮೀರ ನರಮೇಧಕ್ಕೆ ಸಂಬಂಧಿಸಿದಂತೆ ರೀಸರ್ಚ್‌ ನಡೆಸಿ ಹೆಣೆದಿರುವ ಚಿತ್ರಕಥೆಯಿದು. ಅಂದಿನ ಕಾಶ್ಮೀರದ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂದರ್ಭಗಳ ಮೂಲಕ ಕಟ್ಟಿರುವ ಸಿನಿಮಾದ ಟ್ರೈಲರ್‌ನಲ್ಲಿ ಸಾಕಷ್ಟು ಎಮೋಷನಲ್‌ ಡ್ರಾಮಾ ಸನ್ನಿವೇಶಗಳಿವೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಪಲ್ಲವಿ ಜೋಷಿ, ಅನುಪಮ್‌ ಖೇರ್‌, ಪ್ರಕಾಶ್‌ ಬೆಳವಾಡಿ, ಮಿಥುನ್‌ ಚಕ್ರವರ್ತಿ, ದರ್ಶನ್‌ ಕುಮಾಋ, ಭಾಷಾ ಸಂಬಾಲಿ, ಚಿನ್ಮಯ್‌ ಮಂಡ್ಲೇಕರ್‌, ಪುನೀತ್‌ ಇಸ್ಸಾರ್‌, ಮೃಣಾಲ್‌ ಕುಲಕರ್ಣಿ, ಅತುಲ್‌ ಶ್ರೀವಾತ್ಸವ್‌ ಸೇರಿದಂತೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.

ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, “ಕಾಶ್ಮೀರ ನರಮೇದವನ್ನು ದೊಡ್ಡ ಪರದೆ ಮೇಲೆ ತರುವುದು ತುಂಬಾ ಕಷ್ಟದ ಕೆಲಸ. ತುಂಬಾ ಸೂಕ್ಷ್ಮವಾಗಿ ಈ ಕತೆಯನ್ನು ನಾವು ಹೇಳಬೇಕಾಗುತ್ತದೆ. ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಈ ಚಿತ್ರದ ಮೂಲಕ ಜನರು ಕಾಶ್ಮೀರದ ಇತಿಹಾಸದ ಬಗ್ಗೆ ಅರಿಬಹುದು” ಎನ್ನುತ್ತಾರೆ. ಝೀ ಸ್ಟುಡಿಯೋಸ್‌, I Am Buddha ಮತ್ತು ಅಭಿಷೇಕ್‌ ಅಗರ್‌ವಾಲ್‌ ಆರ್ಟ್ಸ್‌ ಬ್ಯಾನರ್‌ನಡಿ ತಯಾರಾಗಿರುವ ಸಿನಿಮಾ ಮಾರ್ಚ್‌ 11ರಂದು ತೆರೆಕಾಣಲಿದೆ.

Previous articleದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಅವಾರ್ಡ್ಸ್‌ 2022
Next articleಈ ವರ್ಷ ಮದುವೆಯಾಗಲಿದ್ದಾರೆಯೇ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ?

LEAVE A REPLY

Connect with

Please enter your comment!
Please enter your name here