The Academy of Motion Picture Arts and Science’ ಸಂಸ್ಥೆಯು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್​ಗಳನ್ನು ಸಂಗ್ರಹಿಸಿ, ಲೈಬ್ರರಿಯಲ್ಲಿ ಇಡುತ್ತದೆ. ಅಂಥ ಚಿತ್ರಗಳ ಸಾಲಿಗೆ ‘ದಿ ವ್ಯಾಕ್ಸಿನ್​ ವಾರ್​’ ಕೂಡ ಸೇರಿರುವುದು ವಿಶೇಷ. ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಈ ವಿಷಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗೆ ಆಸ್ಕರ್ ಕಡೆಯಿಂದ ವಿಶೇಷ ಮನ್ನಣೆ ಸಿಕ್ಕಿದೆ. The Academy of Motion Picture Arts and Science’ ಸಂಸ್ಥೆಯು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್​ಗಳನ್ನು ಸಂಗ್ರಹಿಸಿ, ಲೈಬ್ರರಿಯಲ್ಲಿ ಇಡುತ್ತದೆ. ಅಂಥ ಚಿತ್ರಗಳ ಸಾಲಿಗೆ ‘ದಿ ವ್ಯಾಕ್ಸಿನ್​ ವಾರ್​’ ಕೂಡ ಸೇರಿರುವುದು ವಿಶೇಷ. ಈ ಸುದ್ದಿಯನ್ನು ಹಂಚಿಕೊಂಡು ನಿರ್ದೇಶಕರು ಸಂಭ್ರಮಿಸಿದ್ದಾರೆ. ಈ ವಿಷಯವನ್ನು ತಮ್ಮ X (Twitter)ನಲ್ಲಿ ಹಂಚಿಕೊಂಡಿರುವ ನಿರ್ದೇಶಕರು. ‘ದಿ ವ್ಯಾಕ್ಸಿನ್‌ ವಾರ್‌’ A True Storyಯ ಸ್ಕ್ರಿಪ್ಟ್ ಅನ್ನು Oscarsನ ಲೈಬ್ರರಿಯಿಂದ ‘ಅಕಾಡೆಮಿ ಸಂಗ್ರಹ’ಗಳಿಗೆ ಆಹ್ವಾನಿಸಿ ಸ್ವೀಕರಿಸಲಾಗಿದೆ. ಇದಕ್ಕಾಗಿ ನಾನು ಹೆಮ್ಮೆಪಡುತ್ತೇನೆ. ನೂರಾರು ವರ್ಷಗಳ ಕಾಲ ಹೆಚ್ಚು ಹೆಚ್ಚು ಜನರು ಈ ಸಾಧಕರ ಕತೆಯನ್ನುಓದುತ್ತಾರೆ ಎಂಬುದು ನನಗೆ ಸಂತಸ ತಂದಿದೆʼ ಎಂದು ಬರೆದುಕೊಂಡಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಬಳಿಕ ದೇಶಾದ್ಯಂತ ವಿವೇಕ್‌ ಅಗ್ನಿಹೋತ್ರಿ ಅವರು ಜನಪ್ರಿಯತೆ ಪಡೆದರು. ಆ ಸಿನಿಮಾದ ದೊಡ್ಡ ಗೆಲುವಿನ ಬಳಿಕ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಕೈಗೆತ್ತಿಕೊಂಡಿದ್ದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿತ್ತು. 2022ರಲ್ಲಿ ಬಿಡುಗಡೆಯಾಗಿದ್ದ ‘ದಿ ಕಾಶ್ಮೀರ್​ ಫೈಲ್ಸ್’ ಚಿತ್ರ 252 ಕೋಟಿ ರೂಪಾಯಿ ಗಳಿಸಿತು. 2023ರಲ್ಲಿ ತೆರೆಕಂಡ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ 5.50 ಕೋಟಿ ರೂಪಾಯಿ ಗಳಿಸಿದೆ. ಸೆಪ್ಟೆಂಬರ್​ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

https://x.com/vivekagnihotri/status/1712310102328532993?s=20

LEAVE A REPLY

Connect with

Please enter your comment!
Please enter your name here