‘ರಾವೆನ್‌’ – ಇದು ಕಾಗೆ ಕುರಿತ ಸಿನಿಮಾ! ಚಿತ್ರದ ಪ್ರತೀ ಪಾತ್ರಗಳ ಜೊತೆಗೂ ಕಾಗೆ ಕನೆಕ್ಟ್‌ ಆಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವೇದ್‌. ದಿಲೀಪ್‌ ಪೈ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಇಬ್ಬರು ನಾಯಕಿಯರಾಗಿ ಸ್ವಪ್ನ ಶೆಟ್ಟಿಗಾರ್‌ ಮತ್ತು ಕುಂಕುಮ ಇದ್ದಾರೆ.

‘ಸಾಮಾನ್ಯವಾಗಿ ಕಾಗೆ ತಾಕಿದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂರಬಾರದು ಮುಂತಾದ ನಂಬಿಕೆಗಳು ರೂಡಿಯಲ್ಲಿದೆ.‌ ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ’ ಎನ್ನುತ್ತಾರೆ ‘ರಾವೆನ್‌’ ಸಿನಿಮಾದ ನಿರ್ದೇಶಕ ವೇದ್‌. ‘ರಾವೆನ್‌’ ಅಂದರೆ ಕಾಗೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ವೇದ್‌ ನಿರ್ದೇಶನದ ಎರಡನೇ ಚಿತ್ರವಿದು. ದಿಲೀಪ್ ಪೈ ನಾಯಕನಾಗಿ ನಟಿಸುತ್ತಿದ್ದು, ಸ್ವಪ್ನ ಶೆಟ್ಟಿಗಾರ್‌ ಮತ್ತು ಕುಂಕುಮ ನಾಯಕಿಯರು. ಸಿನಿಮಾದ ಮುಹೂರ್ತ ನೆರವೇರಿದ್ದು, ಇದೇ ತಿಂಗಳ 21ರಿಂದ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರದ ಹೀರೋ ದಿಲೀಪ್‌ ಪೈ ಮಾತನಾಡಿ, ‘ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ.‌ ಒಳ್ಳೆಯ ಪಾತ್ರ. ಕಾಗೆ ಶನಿಮಹಾತ್ಮನ ವಾಹನ. ಅಂಥಹ ಕಾಗೆ ಕುರಿತಾದ ಚಿತ್ರವಿದು. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಗೆಯ ಜೊತೆ ಕನೆಕ್ಟ್ ಆಗುತ್ತವೆ’ ಎನ್ನುತ್ತಾರೆ. ವಿಶ್ವನಾಥ್ ಜಿ ಪಿ ಮತ್ತು ಪ್ರಬಿಕ್ ಮೊಗವೀರ್ ನಿರ್ಮಿಸುತ್ತಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ಶ್ರೇಯಾ ಆರಾಧ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. ಕ್ರಿಸ್ಟೋಫರ್‌ ಸಂಗೀತ ಸಂಯೋಜನೆ, ಆರ್‌ಸಿಟಿ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here