ಶಶಾಂಕ್‌ ಚತುರ್ವೇದಿ ನಿರ್ದೇಶನದ ‘ದೋ ಪಟ್ಟಿ’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. Netflix ತನ್ನ ಅಧಿಕೃತ Instagram ಪುಟದಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ. ಕಾಜೋಲ್‌, ಕೃತಿ ಸನೂನ್‌, ಶಾಹೀರ್‌ ಶೇಖ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕಾಜೋಲ್, ಕೃತಿ ಸನೂನ್ ಮುಖ್ಯ ಭೂಮಿಕೆಯಲ್ಲಿರುವ ‘ದೋ ಪಟ್ಟಿ’ ಹಿಂದಿ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಉತ್ತರ ಭಾರತದ ಬೆಟ್ಟಗಳಲ್ಲಿ ನಡೆಯುವ ಮಿಸ್ಟರಿ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರವನ್ನು ಶಶಾಂಕ್ ಚತುರ್ವೇದಿ ನಿರ್ದೇಶಿಸಿದ್ದಾರೆ. Netflix ತನ್ನ ಅಧಿಕೃತ Instagram ಪುಟದಲ್ಲಿ ಸುದ್ದಿಯನ್ನು ಹಂಚಿಕೊಂಡು ಚಿತ್ರದ ಸೆಟ್‌ನಿಂದ ನಟಿಯರ ಫೋಟೋ ಪೋಸ್ಟ್ ಮಾಡಿದೆ. ಚಿತ್ರವನ್ನು ಸನೋನ್ ಮತ್ತು ಲೇಖಕಿ ಕನ್ನಿಕಾ ಧಿಲ್ಲೋನ್‌ ಹೊಸದಾಗಿ ಪ್ರಾರಂಭಿಸಿರುವ Blue Butterfly Films ಮತ್ತು Kathha Pictures ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ರೋಹಿತ್ ಶೆಟ್ಟಿಯವರ 2015ರ ‘ದಿಲ್‌ವಾಲೇ’ ಚಿತ್ರದ ನಂತರ ಕಾಜೋಲ್ ಮತ್ತು ಕೃತಿ ಸನೋನ್ ನಡುವಿನ ಎರಡನೇ ಸಹಯೋಗದ ಚಿತ್ರ ಇದಾಗಿದೆ. ಈ ಚಿತ್ರದ ಮೂಲಕ ಕಿರುತೆರೆಯ ಜನಪ್ರಿಯ ಕಲಾವಿದ ಶಾಹೀರ್‌ ಶೇಖ್‌ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here