ಟೀಸರ್‌ ಮೂಲಕ ಸದ್ದು ಮಾಡಿದ್ದ ‘ಲಸ್ಟ್‌ ಸ್ಟೋರೀಸ್‌ 2’ ಆಂಥಾಲಜಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇಲ್ಲಿನ ನಾಲ್ಕು ಕತೆಗಳನ್ನು ಕೊಂಕಣ ಸೇನ್‌ ಶರ್ಮಾ, ಬಲ್ಕಿ, ಸುಜಯ್‌ ಘೋಷ್‌ ಮತ್ತು ಅಮಿತ್‌ ರವೀಂದ್ರನಾಥ್‌ ಶರ್ಮಾ ನಿರ್ದೇಶಿಸಿದ್ದಾರೆ. ‘ಲಸ್ಟ್‌ ಸ್ಟೋರೀಸ್‌ 2’ Netflixನಲ್ಲಿ ಜೂನ್‌ 29ರಿಂದ ಸ್ಟ್ರೀಮ್‌ ಆಗಲಿದೆ.

‘ಇದು ಮಹಿಳೆಯರ ದೃಷ್ಟಿಯಿಂದ ಸಂಬಂಧಗಳು, ಬದುಕನ್ನು ನೋಡುವ ಬಗೆ’ ಎಂದು ‘ಲಸ್ಟ್‌ ಸ್ಟೋರೀಸ್‌ 2’ ಆಂಥಾಲಜಿ ಸಿನಿಮಾದ ನಿರ್ಮಾಪಕರಾದ ಅಶಿ ದುವಾ ಮತ್ತು ರೊನ್ನಿ ಸ್ಕ್ರ್ಯೂವಾಲಾ ಹೇಳುತ್ತಾರೆ. ಸಿನಿಮಾದ ಟ್ರೈಲರ್‌ ಇದಕ್ಕೆ ಇಂಬು ನೀಡುತ್ತದೆ. ಸ್ತ್ರೀ ಪಾತ್ರಗಳನ್ನು ಪ್ರಧಾನವಾಗಿಟ್ಟುಕೊಂಡು ನಾಲ್ವರು ನಿರ್ದೇಶಕರು ಕತೆ ಮಾಡಿದ್ದಾರೆ. ಇಲ್ಲಿನ ಒಂದು ಕತೆಯಲ್ಲಿ ನಟಿಸಿರುವ ವಿಜಯ್‌ ವರ್ಮ ಮತ್ತು ತಮನ್ನಾ ಭಾಟಿಯಾ ಈಗ ತಮ್ಮ ನಿಜ ಬದುಕಿನ ಪ್ರೀತಿಯ ಮೂಲಕವೂ ಸುದ್ದಿಯಲ್ಲಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡುತ್ತಲೇ ಅವರು ತಮ್ಮ ಪ್ರೀತಿ, ಬದುಕಿನ ಬಗ್ಗೆಯೂ ಮಾತನಾಡತೊಡಗಿದ್ದು, ಸಿನಿಮಾ ಪ್ರಮೋಷನ್‌ಗೆ ಇದು ವರವಾಗಿದೆ! ಸಿನಿಮಾದ ಮತ್ತೊಂದು ಕತೆಯನ್ನು ನಿರ್ದೇಶಿಸಿರುವ ಕೊಂಕಣ ಸೇನ್‌ ಶರ್ಮಾ, ‘ಮಹಿಳೆ ಸ್ವತಂತ್ರ್ಯವಾಗಿ ಯೋಚಿಸಿ ತನ್ನ ಜೀವನದ ಮೇಲೆ ಹಿಡಿತ ಸಾಧಿಸುವ ಎಳೆಯನ್ನು ನಾನಿಲ್ಲಿ ನಿರೂಪಿಸಿದ್ದೇನೆ’ ಎಂದಿದ್ದಾರೆ.

ಕಾಜೋಲ್‌, ನೀನಾ ಗುಪ್ತಾ, ತಮನ್ನಾ ಭಾಟಿಯಾ, ವಿಜಯ್‌ ವರ್ಮ, ಮೃಣಾಲ್‌ ಠಾಕೂರ್‌, ಅಂಗದ್‌ ಬೇಡಿ, ಅಮೃತಾ ಸುಭಾಷ್‌, ತಿಲೋತ್ತಮಾ ಶೋಮ್‌, ಕುಮುದ್‌ ಮಿಶ್ರಾ ಈ ಆಂಥಾಲಜಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೊಂಕಣ ಸೇನ್‌ ಶರ್ಮಾ, ಬಲ್ಕಿ, ಸುಜಯ್‌ ಘೋಷ್‌ ಮತ್ತು ಅಮಿತ್‌ ರವೀಂದ್ರನಾಥ್‌ ಶರ್ಮಾ ನಿರ್ದೇಶಿಸಿದ್ದಾರೆ. ‘ಲಸ್ಟ್‌ ಸ್ಟೋರೀಸ್‌’ ಮೊಲದ ಸರಣಿ ಪ್ರತಿಷ್ಠಿತ Emmy ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮಿನೇಟ್‌ ಆಗಿತ್ತು. ನಿರ್ಮಾಪಕ ರೋನ್ನಿ ಸ್ಕ್ರ್ಯೂವಾಲಾ, ‘Emmy ಪ್ರಶಸ್ತಿಗೆ ಪಾತ್ರವಾದ ಸಿನಿಮಾದ ಸರಣಿಯನ್ನು ಮಾಡಿರುವುದು ನಮಗೆ ಹೆಮ್ಮೆ ಇದೆ. ಈ ಹಿಂದೆ ನಾವು ನೆಟ್‌ಫ್ಲಿಕ್ಸ್‌ಗೆ ಮಾಡಿದ್ದ ಮಿಷನ್‌ ಮಜ್ನೂ, ಲಸ್ಟ್‌ ಸ್ಟೋರೀಸ್‌, ಪಾವಾ ಕಡೈಗಳ್‌, ರಾತ್‌ ಅಕೇಲಿ ಹೈ, ಧಮಾಕಾ ಸಿನಿಮಾಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಬಾರಿಯೂ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇವೆ’ ಎಂದಿದ್ದಾಎ. ‘ಲಸ್ಟ್‌ ಸ್ಟೋರೀಸ್‌ 2’ ನೆಟ್‌ಫ್ಲಿಕ್ಸ್‌ನಲ್ಲಿ ಜೂನ್‌ 29ರಿಂದ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here