ಮೋಹನ್‌ ಮುನಿನಾರಾಯಣಪ್ಪ ನಿರ್ದೇಶನದ ‘ಡಾಲರ್ಸ್‌ ಪೇಟೆ’ ಥ್ರಿಲ್ಲರ್‌ ಸಿನಿಮಾ ಇದೇ ಸೆಪ್ಟೆಂಬರ್‌ 6ರಂದು ಥಿಯೇಟರ್‌ಗೆ ಬರುತ್ತಿದೆ. ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಪೃಥ್ವಿ ಅಂಬರ್‌ ನಟಿಸಿದ್ದಾರೆ.

ಸತ್ಯ ಘಟನೆ ಆಧರಿಸಿ ಮೋಹನ್‌ ಮುನಿನಾರಾಯಣಪ್ಪ ನಿರ್ದೇಶಿಸಿರುವ ‘ಡಾಲರ್ಸ್‌ ಪೇಟೆ’ ಸಿನಿಮಾ ಇದೇ ಸೆಪ್ಟಂಬರ್ 6ಕ್ಕೆ ತೆರೆಕಾಣಲಿದೆ. ತಮಿಳುನಾಡಿನ ಬ್ಯಾಂಕ್‌ವೊಂದರ ಮ್ಯಾನೇಜರ್‌ನಿಂದ ಆಕಸ್ಮಾತ್‌ ಆಗಿ 13 ಕೋಟಿ ರೂಪಾಯಿ 100 ಜನಕ್ಕೆ ಡೆಪಾಸಿಟ್‌ ಆಗುತ್ತದೆ. ಅದು ಹೇಗೆ, ಏನು ಅನ್ನುವದರ ಸುತ್ತ ಸಿನಿಮಾ ಸಾಗುತ್ತದೆ. ಹೈಪರ್ ಲಿಂಕ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ‘ಲೂಸಿಯಾ’ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್ಸ್ ಮುಖ್ಯಪಾತ್ರಗಳಲ್ಲಿದ್ದಾರೆ. ‘ದಿಯಾ’ ಪೃಥ್ವಿ ಅಂಬರ್ ಅತಿಥಿ ಕಲಾವಿದ. ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘು ರಾಮಕೊಪ್ಪ, ಹೊನ್ನವಳ್ಳಿ ಕೃಷ್ಣ, ಡ್ರಾಮಾ ಜೂನಿಯರ್ಸ್ ಮಹೇಂದ್ರ ನಟಿಸಿದ್ದಾರೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಪೆಂಟ್ರಿಕ್ಸ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಪೂಜಾ ಟಿ ವೈ ಚಿತ್ರ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here