ಪೂರಿ ಜಗನ್ನಾಥ್‌ ನಿರ್ದೇಶನದಲ್ಲಿ ರಾಮ್‌ ಪೋತಿನೇನಿ ನಟಿಸಿರುವ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾ ಇದೇ ಆಗಸ್ಟ್‌ 15ರಂದು ತೆರೆಕಾಣಲಿದೆ. ಕಾವ್ಯಾ ಥಾಪರ್‌ ನಾಯಕಿಯಾಗಿ ನಟಿಸಿರುವ ಚಿತ್ರದ ಖಳಪಾತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಇದ್ದಾರೆ.

ರಾಮ್‌ ಪೋತಿನೇನಿ ನಟನೆಯ ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾ ಇದೇ ಆಗಸ್ಟ್‌ 15ರಂದು ತೆರೆಕಾಣಲಿದೆ. ಪೂರಿ ಜಗನ್ನಾಥ್‌ ನಿರ್ದೇಶನದ ಚಿತ್ರದ ಖಳಪಾತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ನಟಿಸಿದ್ದಾರೆ. ಕಾವ್ಯಾ ಥಾಪರ್‌ ಸಿನಿಮಾ ನಾಯಕನಟಿ. ಟೀಸರ್‌ನಿಂದ ಗಮನ ಸೆಳೆದಿದ್ದ ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆಯಾಗಿರುವುದು ರಾಮ್‌ ಅಭಿಮಾನಿಗಳಲ್ಲಿ ಸಂತಸ ತಂದಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆಯಾಗಲಿದೆ. ಮಣಿ ಶರ್ಮಾ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಅಡಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮೊದಲು ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್ 2 ‘ಡಬಲ್ ಇಸ್ಮಾರ್ಟ್’ ಸಿನಿಮಾ ಬರುತ್ತಿದೆ.

LEAVE A REPLY

Connect with

Please enter your comment!
Please enter your name here