‘ಆದಿಪರ್ವ’ ಚಿತ್ರದ ಮೂಲಕ ನಟಿ ಲಕ್ಷ್ಮೀ ಮಂಚು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇದೊಂದು ಭಕ್ತಿಪ್ರಧಾನ ಫ್ಯಾಂಟಸಿ ಸಿನಿಮಾ. ದಶಕಗಳಿಂದ ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಸಂಜೀವ್‌ ಕುಮಾರ್‌ ನಿರ್ದೇಶನದ ಸಿನಿಮಾ ಏಪ್ರಿಲ್‌ ಎರಡನೇ ವಾರ ತೆರೆಕಾಣಲಿದೆ.

ತೆಲುಗಿನ ಖ್ಯಾತ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮೀ ಮಂಚು ‘ಆದಿಪರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸಂಜೀವ್ ಕುಮಾರ್ ನಿರ್ದೇಶಿಸಿದ್ದಾರೆ. ಬಹುತಾರಾಗಣದ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಇದೇ ಮಾರ್ಚ್ 8ರ ಮಹಾ ಶಿವರಾತ್ರಿ ಹಬ್ಬದಂದು ಚಿತ್ರದ ಟ್ರೇಲರ್ ಹಾಗೂ ಒಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಏಪ್ರಿಲ್ ಎರಡನೇ ವಾರದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. Anvika Arts ಮತ್ತು America – India Entertainments ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗಿದೆ.

ಎಸ್ತರ್, ಸತ್ಯಪ್ರಕಾಶ್ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ಹರೀಶ್ ಅವರ ಛಾಯಗ್ರಹಣವಿರುವ ಚಿತ್ರಕ್ಕೆ ರಾಮ್ ಸುಧಿ (ಸುಧೀಂದ್ರ) ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಿದ್ದಾರೆ. ನಿರ್ದೆಶಕರಾದ ಸಂಜೀವ್‌ ಅವರು ರವಿ ಕಿರಣ್ ನಿರ್ದೇಶನದ ‘ಬದುಕು’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಪೂಜಾ ಗಾಂಧಿ ಅಭಿನಯದ ‘ಆಪ್ತ’, ‘ದಂಡು’ ಮತ್ತು ‘ಕ್ಯೂ’, ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ತೆಲುಗು ಮತ್ತು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕತೆ, ಚಿತ್ರಕತೆ ನೀಡುವುದರ ಜೊತೆಗೆ ತಮ್ಮದೇ ಬ್ಯಾನರ್ ಅಡಿಯಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿರುವ ಇವರು ಬಹಳ ದಿನಗಳ ನಂತರ ಹಿರಿತೆರೆಗೆ ಮರಳಿದ್ದಾರೆ.

LEAVE A REPLY

Connect with

Please enter your comment!
Please enter your name here