ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಇದೇ ಆಗಸ್ಟ್‌ 9ರಂದು ತೆರೆಕಾಣಲಿದೆ. ರಿಲೀಸ್‌ ಡೇಟ್‌ ಜೊತೆಗಿನ ಪೋಸ್ಟರ್‌ನೊಂದಿಗೆ Instagram ಖಾತೆಯಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಚರಣ್‌ ರಾಜ್‌ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

ದುನಿಯಾ ವಿಜಯ್‌ ಮಹತ್ವಾಕಾಂಕ್ಷೆಯ ಸಿನಿಮಾ ‘ಭೀಮ’ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇಂದು ದುನಿಯಾ ವಿಜಯ್‌ ತಮ್ಮ Instagram ಖಾತೆಯಲ್ಲಿ ರಿಲೀಸ್‌ ಡೇಟ್‌ ಜೊತೆಗಿನ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇದೇ ಆಗಸ್ಟ್‌ 9ರಂದು ಸಿನಿಮಾ ತೆರೆಗೆ ಬರಲಿದೆ. ನಟ ದುನಿಯಾ ವಿಜಯ್‌ ಇತ್ತೀಚಿನ ವರ್ಷಗಳಲ್ಲಿ ಬರವಣಿಗೆ ಕುರಿತೂ ಆಸಕ್ತಿ ಹೊಂದಿದ್ದರು. ತಮ್ಮ ಸಿನಿಮಾಗಳಿಗೆ ಬರೆಯುವ writersಗೆ ಸೂಕ್ತ ಸಲಹೆ – ಸೂಚನೆ ನೀಡುತ್ತಿದ್ದರು. ‘ಸಲಗ’ ಚಿತ್ರದೊಂದಿಗೆ ನಿರ್ದೇಶಕರೂ ಆಗಿ ಯಶಸ್ಸು ಕಂಡ ನಂತರ ಅವರ ವಿಶ್ವಾಸ ಹೆಚ್ಚಾಯ್ತು. ‘ಸಲಗ’ ಸಿನಿಮಾದ ಯಶಸ್ಸಿನ ನಂತರ ಶುರುವಾಗಿದ್ದೇ ‘ಭೀಮ’. ಅಶ್ವಿನಿ ಚಿತ್ರದ ನಾಯಕನಟಿ. ಬ್ಲ್ಯಾಕ್‌ ಡ್ರಾಗನ್‌ ಮಂಜು ಈ ಚಿತ್ರದೊಂದಿಗೆ ಖಳನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಈ ಚಿತ್ರಕ್ಕಾಗಿ ಅವರು ಬಹಳಷ್ಟು ಸಮಯ ವ್ಯಯಿಸಿದ್ದಾರೆ. ಮಾಸ್ತಿ ಅವರೊಂದಿಗೆ ತಾವೂ ಬರವಣಿಗೆ ಮಾಡಿದ್ದಾರೆ. ಚರಣ್‌ ರಾಜ್‌ ಸಂಗೀತದಲ್ಲಿ ಈಗಾಗಲೇ ಸಿನಿಮಾದ ‘ಬ್ಯಾಡ್‌ ಬಾಯ್ಸ್‌’ ಸಾಂಗ್‌ ವೈರಲ್‌ ಆಗಿದೆ. ಬಾಲಕೃಷ್ಣ ನಟಿಸಿದ್ದ ‘ವೀರಸಿಂಹಾರೆಡ್ಡಿ’ ತೆಲುಗು ಚಿತ್ರದೊಂದಿಗೆ ಅವರು ಟಾಲಿವುಡ್‌ಗೂ ಪರಿಚಯವಾಗಿದ್ದರು. ಹಾಗಾಗಿ ‘ಭೀಮ’ ಸಿನಿಮಾ, ತೆಲುಗು ಸೇರಿದಂತೆ ಇತರೆ ಭಾಷೆಗಳಿಗೂ ಡಬ್‌ ಆಗುವ ಸಾಧ್ಯತೆಗಳಿವೆ. ಜಗದೀಶ ಫಿಲ್ಮ್ಸ್‌ ಮತ್ತು ಕೃಷ್ಣ ಕ್ರಿಯೇಷನ್ಸ್‌ ಜೊತೆಗೂಡಿ ಸಿನಿಮಾ ನಿರ್ಮಿಸಿವೆ. ಶಿವ ಸೇನಾ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here